ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 
2012 ಕನ್ನಡ ಶಾಲಾದಿನಾಚರಣೆ picture

2012 ಕನ್ನಡ ಶಾಲಾದಿನಾಚರಣೆ

ಕಾರ್ಯಕ್ರಮದ ಚಿತ್ರಗಳನ್ನು ನೊಡಲು ಇಲ್ಲಿ ಕ್ಲಿಕ್ ಮಾಡಿ

ಸಿಡ್ನಿ ಕನ್ನಡ ಶಾಲೆ ವಾರ್ಷಿಕ ದಿನಾಚರಣೆಯ ಪ್ರಯುಕ್ತ ಡಿ 15 ರಂದು Wattle Grove ಸಾರ್ವಜನಿಕ ಶಾಲೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಪೋಷಕರೂ, ಮಕ್ಕಳೂ ಅತಿಥಿಗಳು ಎಲ್ಲರೂ ಸಮಯಕ್ಕೆ ಸರಿಯಾಗಿ ನೆರೆದು ಮಧ್ಯಾಹ್ನ ಮೂರಕ್ಕೆ ಪುಟ್ಟ ಮಕ್ಕಳಿಂದ ಶಾಲೆಯ ಪ್ರಾರ್ಥನೆಯಿಂದ ಆರಂಭಗೊಂಡಿತು.ಬಂದವರಿಗೆಲ್ಲ ಮುಗುಳ್ನಗೆ ಬೀರುವಂತೆ ಮೊದಲಿನಲ್ಲೇ ರಾಜೇಶ ಹೆಗ್ಗಡೆ ಸ್ವಾಗತ ಕೋರಿದರು.ನಂತರ ಮುಖ್ಯ ಅತಿಥಿಗಳಾದ ಶ್ರೀ ಸಿಡ್ನಿ ಶ್ರೀನಿವಾಸ್ ಮಕ್ಕಳಿಗೆ ಒಂದೆರೆಡು ಹಿತವಚನ ಹೇಳಿದರು.ದೂರದೂರಿನಲ್ಲಿ ಕನ್ನಡ ಕಲಿಯಲು ಬರುತ್ತಿರುವ ಮಕ್ಕಳ ಮತ್ತು ಅವರನ್ನು ಶಾಲೆಗೆ ಕರೆತರುವ ಪೋಷಕರನ್ನೂ ಪ್ರಶಂಸೆ ಮಾಡಿದರೂ.ಹಿರಿಯರಾದ ಶ್ರೀಯುತ ಅಶೋಕ್ ಅವರೂ ಅತಿಥಿಗಳ ಜೊತೆಗೆ ಉಪಸ್ಥಿತರಿದ್ದರು.ಶಾಲೆಯ ವಾರ್ಷಿಕ ಲೆಕ್ಕ ಪತ್ರದ ವಿವರ ಶ್ರೀಮತಿ ಪ್ರತಿಭಾ ಸಭೆಗೆ ಓದಿ ಒಪ್ಪಿಸಿದರು.ನಂತರ ಶ್ರೀ ನಾರಾಯಣ ಅವರು ವರ್ಷದ ಅತ್ಯುತ್ತಮ ವಿಧ್ಯಾರ್ಥಿಗಳ ಹೆಸರು ಸೂಚಿಸಿ ಅವರಿಗೆ ಶ್ರೀ ಅಶೋಕ್ ಮತ್ತು ಶ್ರೀ ಸಿಡ್ನಿ ಶ್ರೀನಿವಾಸ್ ಅವರಿಂದ ಉಡುಗೊರೆ, ಪ್ರಶಂಸಾ ಪತ್ರವನ್ನೂ ವಿತರಿಸಿದರು. ಶಾಲೆಯ ನಿರಂತರ ಸೇವೆಗೆ ನಿಂತಿರುವ ಶಿಕ್ಷಕರಿಗೂ ಉಡುಗೊರೆಗಳನ್ನು ಕೃತಜ್ಞತಾ ಭಾವದಿಂದ ಕೊಡಲಾಯಿತು. ಸಭೆಯ ಮುಖ್ಯ ಅತಿಥಿಗಳ ಜೊತೆಗೆ ಕುಳಿತಿದ್ದ ಶಾಲೆಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ನಾಗೇಂದ್ರ ಅವರು ಕನ್ನಡ ಉಳಿವು ಅಳಿವಿನ ಮನವರಿಕೆ ಮಾಡಿಕೊಡುತ್ತಾ ಭಾಷೆ ಎಲ್ಲೆಲ್ಲಿ ಹೇಗೆ ಬಳಸಬಹುದು ಎನ್ನುವುದರ ಬಗ್ಗೆ ಕುತೂಹಲ ಮಾಹಿತಿಯನ್ನೂ ತಮ್ಮ ಪುಟ್ಟ ಭಾಷಣದಲ್ಲಿ ಅಳವಡಿಸಿ ಆಡಿದರು.
ಮುಂದೆ ಮಕ್ಕಳು ನಡೆಸಿಕೊಟ್ಟ ಚಿಕ್ಕ ಮನರಂಜನಾ ಕಾರ್ಯಕ್ರಮ ಚೆನ್ನಾಗಿ ಮೂಡಿ ಬಂದಿತು.ಅಭ್ಯಾಸದ ಕೊರತೆಯಿಂದ "ಸಿಕ್ಕರೆ ಸಿಕ್ಕರೆ ಅವಕಾಶ" ಎಲ್ಲಾ ಮಕ್ಕಳ ದ್ವನಿ ಕೂಡಿ ಬಾರದಿದ್ದರೂ, ತಿಂಡಿ ಹಾಡನ್ನು ಚೆನ್ನಾಗಿ ಹಾಡಿ ಪ್ರೇಕ್ಷಕರಿಗೆ ಮುದನೀಡಿದರು. ಸಂಜನ ಸಚಿತ ಅಭಿನಯಿಸಿ ನಡೆಸಿಕೊಟ್ಟ ಬೆರಳುಗಳ ಬಗ್ಗೆಯ ಸ್ಕಿಟ್ ಎಲ್ಲರ ಮೆಚ್ಚುಗೆ ಪಡೆದರೆ, ವಿನಯ್, ವಿಕಾಸ್, ಸಿಂಚನ ಹಾಡಿದ ಶಿಶುಗೀತೆಗಳು, ಡಾ|ರಾಜ್ ಡೈಲಾಗ್ ಧೈರ್ಯವಾಗಿ ಆಡಿದ ಪಾರ್ಥ,ಸುಂದರ ಕವಿತೆಗಳನ್ನು ಹಾಡಿದ ನಿಕಿತ ಮತ್ತು ನಿತ್ಯ, ಚಲನಚಿತ್ರಗೀತೆಯಾದ "ಹೂವಿನಾ ಬಾಣದಂತೆ" ನಿರೀಕ್ಷ ಹಾಡಿದ ಇಂಪಾದ ಹಾಡು, ದ ರಾ ಬೇಂದ್ರೆಯವರ ರಚನೆಯಾದ "ಪಾತರ ಗಿತ್ತಿ ಪಕ್ಕ" ಸಿಂಧು ಸೊಗಸಾಗಿ ಹಾಡಿದ್ದು ಆಕೆಯ ಜೊತೆಗೆ ಕೀ ಬೋರ್ಡ್ ಜೊತೆ ನೀಡಿದ ತನು ಇವೆಲ್ಲಾ ಕಾರ್ಯಕ್ರಮಕ್ಕೆ ಮೆರಗು ನೀಡಿದರೆ. ರಾಘವ್,ಆದಿತ್ಯ,ದೀಪಕ್,ಸುಕೃತಿ,ಸಿಂಧು,ಪ್ರಣವ್,ಅಮಿತ್,ನಿರೀಕ್ಷ,ಸಹನ,ಆಜ್ಞಾ,ಆತ್ರೇಯಾ,ಸೌಮ್ಯ,ಸ್ವಾತಿ ಹಾಸ್ಯಚಟಾಕೆಗಳನ್ನು ಹಾರಿಸಿ ಎಲ್ಲರಲ್ಲಿ ನಗೆ ಬುಗ್ಗೆ ಎಬ್ಬಿಸಿದರು. ಎಂದಿನಂತೆ ಅಂತ್ಯದಲ್ಲಿ ಎಲ್ಲರೂ ಶತಾಯುಶ ಆತವಾಡಿ ನಕ್ಕು,ನಲಿದು ಬಿಸಿ ಕಾಫಿ ಚಕ್ಕುಲಿ ಸವಿದು ಮನೆಗೆ ತೆರಳಿದರು.

ಕಾರ್ಯಕ್ರಮಗಳ ಪಟ್ಟಿಗೆ ಹಿಂತಿರುಗು


ಇತ್ತೀಚಿನ ಕಾರ್ಯಕ್ರಮಗಳು

pictureಸಿಡ್ನಿ ನಾಟಕೋತ್ಸವ
pictureಸಿಡ್ನಿ ದಸರಾ/ರಾಜ್ಯೋತ್ಸವ ಹಾಡು ಹಸೆ ಹಬ್ಬ
pictureಕನ್ನಡ ಸಾಹಿತ್ಯ ಸಂಗಮ
pictureಸಿಡ್ನಿ ಯುಗಾದಿ ಹಬ್ಬ 2015
pictureಸಿಡ್ನಿ ದಸರಾ ಬೊಂಬೆ ಹಬ್ಬ ಮತ್ತು ಸಂಗೀತ ಸಂಜೆ
pictureಕನ್ನಡ ಕ್ಯಾರೆಯೋಕೆ ಸಂಜೆ ಮತ್ತು ಶ್ರೀಯುತ ಸುದರ್ಶನ್ ಅವರಿಗೆ ಸನ್ಮಾನ
pictureಸಿಡ್ನಿ ಯುಗಾದಿ ಆಚರಣೆ 2014
pictureಅದ್ದೂರಿ ದಸರಾ ಮತ್ತು ಕನ್ನಡ ರಾಜ್ಯೋತ್ಸವ
pictureಅದ್ದೂರಿ ದಸರಾ ಮತ್ತು ಕನ್ನಡ ರಾಜ್ಯೋತ್ಸವ
pictureಪಿ ಬಿ ಶ್ರೀನಿವಾಸ್ ಶ್ರದ್ಧಾಂಜಲಿ
 
 

© ಹಕ್ಕುಸ್ವಾಮ್ಯ 2008 - 2026