![]() | ಸಿಡ್ನಿ ಯುಗಾದಿ ಹಬ್ಬ 2015 |
ಆತ್ಮೀಯರೇ,
ಇದೇ 2015 ಏಪ್ರಿಲ್ 18 ರಂದು ಶನಿವಾರ ಸಂಜೆ WattleGrove ಸಾರ್ವಜನಿಕ ಶಾಲೆಯ ಆವರಣದಲ್ಲಿ ಸಿಡ್ನಿ ಕನ್ನಡ ಶಾಲೆಯ ಮಕ್ಕಳು ಮತ್ತು ಸುಗಮ ಗಾನ ಸಮಾಜದ ಸದಸ್ಯರು ನಡೆಸಿಕೊಡುವ ಕಾರ್ಯಕ್ರಮಕ್ಕೆ ತಮಗೆಲ್ಲರಿಗೂ ನಲ್ಮೆಯ ಬರುವು.
ಅಂದು ಹಾಸ್ಯ ಚಟಾಕಿಗಳು, ಕಿರುನಾಟಕಗಳು, ಶಾಸ್ತ್ರೀಯ ಸಂಗೀತ, ಭಾವಗೀತೆ, ಭಕ್ತಿಗೀತೆ ಹಾಗೂ ಕ್ಯಾರೆಯೋಕೆ ಚಲನಚಿತ್ರಗೀತೆಗಳ ಗಾಯನ ಒಳಗೊಂಡ ವೈವಿಧ್ಯಮಯ ಮನರಂಜನೆ ಏರ್ಪಡಿಸಲಾಗಿದೆ. ನಂತರ ಉಚಿತ ಲಘು ಉಪಹಾರವನ್ನೂ ಏರ್ಪಡಿಸಲಾಗಿದೆ.
ಸಿಡ್ನಿ ಕನ್ನಡ ಶಾಲೆಯ ಆರ್ಥಿಕ ಸಹಾಯಕ್ಕಾಗಿ ನಡೆಸುತ್ತಿರುವ ಈ ಕಾರ್ಯಕ್ರಮಕ್ಕೆ ತಾವೆಲ್ಲರೂ ಬಂದು ಯಸಸ್ವಿಯಾಗಿ ನಡೆಸಿಕೊಡಬೇಕಾಗಿ ಈ ಮೂಲಕ ಕೋರಿಕೆ.
ಸಮಯ ಸಂಜೆ 05.30ಕ್ಕೆ
ಕುಟುಂಬಕ್ಕೆ $20