![]() | 2011 ಸಿಡ್ನಿ ಕನ್ನಡ ಶಾಲಾದಿನಾಚರಣೆಕಾರ್ಯಕ್ರಮದ ಚಿತ್ರಗಳನ್ನು ನೊಡಲು ಇಲ್ಲಿ ಕ್ಲಿಕ್ ಮಾಡಿ |
ಸಿಡ್ನಿ ಕನ್ನಡ ಪಾಠ ಶಾಲೆಯ ೨೦೧೧ ರ ವಾರ್ಷಿಕ ದಿನ ಡಿಸೆಂಬರ್೧೭ರಂದು Wattlegrove Public School ನಲ್ಲಿ ಬಹಳ ಉತ್ಸಾಹದಿಂದ ನಡೆಯಿತು. ಸುಮಾರು ೭ ವರ್ಷಗಳ ಹಿಂದೆ ಸಿಡ್ನಿಯಲ್ಲಿ ಮಕ್ಕಳಿಗೆ ಕನ್ನಡ ಕಲಿಸುವ ಹುರುಪಿಂದಹುಟ್ಟಿಕೊಂಡ ಸಣ್ಣ ಗುಂಪು, ಇಂದು ಸುಮಾರು ೪೫ ಮಕ್ಕಳಿಗೆ ಪ್ರತಿ ಶನಿವಾರದಂದು ತಪ್ಪದೆಶಾಲೆ ನಡೆಸುತ್ತಿದೆ. ಲಿವೆರ್ಪೂಲ್ ಮತ್ತು ಪ್ಯಾರಮಟ ಎನ್ನುವ ಎರಡು ಜಾಗಗಳಲ್ಲಿತರಗತಿಗಳು ನಡೆಯುತಿದ್ದು , ಈಗ ಮತ್ತೆರೆಡು ಶಾಕೆ ತೆರೆಯುವ ಯೋಚನೆಯು ಇದೆ. ೨೦೧೧ ರ ವಾರ್ಷಿಕ ದಿನಾಚರಣೆಯಲ್ಲಿ ಮಕ್ಕಳಿಂದ ಕನ್ನಡ ಹಾಡುಗಳು, ಹಾಸ್ಯ ಚಟಾಕಿಗಳಜೊತೆಗೆ, ಶಾಲೆಯ ಅಧ್ಯಕ್ಷರ ಭಾಷಣ ಮತ್ತು ಅತಿಥಿಗಳ ಹಿತನುಡಿ, ಕೆಲವು ಆಟಗಳು ಜೊತೆಗೆ ತಿನ್ನಲು ತಿಂಡಿ ತಿನಿಸುಗಳೂ ಸಹ ಒಳಗೊಂಡಿದ್ದು ಸಂಭ್ರಮ ಹರಡಿತ್ತು.
'ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು' ಎಂದು ಕುವೆಂಪುರವರ ಈ ಸಾಲಿನೊಂದಿಗೆ ಶ್ರೀಯುತ ರಾಜೇಶ್ ಹೆಗ್ಗಡೆ ಯವರು ಕಾರ್ಯಕ್ರಮಕ್ಕೆಬಂದ ಎಲ್ಲರನ್ನು ಆದರದಿಂದ ಬರಮಾಡಿಕೊಂಡರು.
ನಂತರ ಶಾಲೆಯ ಅಧ್ಯಕ್ಷರಾದ ಶ್ರೀಮತಿ ವೀಣಾ ಸುದರ್ಶನರವರು, ಕನ್ನಡ ಭಾಷೆಯಹೆಗ್ಗಳಿಕೆಯ ವಿಷಯವಾಗಿ ಹೇಳುತ್ತಾ ಮುಖ್ಯವಾಗಿ ಕನ್ನಡಕ್ಕೆ ಇದುವರೆವಿಗೂ ಸಂದಿರುವ 8ಜ್ಞಾನಪೀಠ ಪ್ರಶಸ್ತಿಗಳ ಬಗ್ಗೆ ವಿವರವಾಗಿ ಮಕ್ಕಳಿಗೆ ತಿಳಿ ಹೇಳಿದರು.ಹಾಗೇ ಪ್ರಸ್ತುತ ದುಃಸ್ಥಿತಿಯನ್ನೂ ಮನವರಿಕೆ ಮಾಡಿಕೊಟ್ಟರು.
ಸಮಾರಂಭದ ಅತಿಥಿ, ಶ್ರೀ ನಾಗಶಯನ ಬೆಳ್ಳಾವೆಯವರು, ತಾಯ್ನುಡಿಯ ಕಲಿಕೆ ಹೇಗೆ ನಮ್ಮ ಮಿಕ್ಕ ಎಲ್ಲಾ ಕಲಿಕೆಗೂ ಸಹಕಾರಿ ಎಂದು ಹೇಳಿದರು. ಕರ್ನಾಟಕದಲ್ಲಿ ಸರಕಾರೀಶಾಲೆಗಳನ್ನು ಮುಚ್ಚುವ ಬಗ್ಗೆ ಚರ್ಚೆ ನಡೆಯುತ್ತಿರುವಾಗ, ಸಿಡ್ನಿಯಲ್ಲಿ ಹೀಗೊಂದು ಶಾಲೆನಡೆಯುತ್ತಿರುವುದೂ ಹಾಗೂ ಮತ್ತೆ ಶಾಕೆಗಳು ತೆರೆಯುವ ವಿಷಯ ನೆನೆದು ನಿಜಕ್ಕೂ ಹೆಮ್ಮೆಪಡುವಂತಾ ವಿಷಯವೆಂದರು. ಮುಂದೆ ವಿಶೇಷ ಅತಿಥಿಗಳಾದ ಡಾ. ರಾಮಕೃಷ್ಣ ರವರು, ವಲಸಿಗರಾಗಿ ಬಂದಿರುವಯಾವುದೇ ಜನಾಂಗಕ್ಕೂ ಅವರ ತಾಯ್ನುಡಿ ಹೇಗೆ ಹೊರ ದೇಶದಲ್ಲಿ ಮತ್ತೆ ಒಟ್ಟುಗೂಡಿಸುವಸಾಧನವಾಗುತ್ತದೆ ಎಂದು ತಿಳಿಸುತ್ತಾ ಶ್ರೀ ಕುವೆಂಪುರವರ ಹಾಗು ಜಿ ಪಿ ರಾಜರತ್ನಂ ರವರಮಕ್ಕಳ ಪದ್ಯಗಳನ್ನು ನೆನಪಿಸಿಕೊಂಡರು.
ನಂತರ ಮಕ್ಕಳ ಈ ವರ್ಷದ ಕಲಿಕೆಯ ಸಾಧನೆಯನ್ನು ಗುರುತಿಸಿ ಪ್ರಶಂಸಾ ಪತ್ರನೀಡಲಾಯಿತು. ನಂತರ ಮಕ್ಕಳಿಂದ ಹಾಡು,ಕಿರುನಾಟಕ, ಕವನ ಓದುವುದು, ಹಾಸ್ಯಚಟಾಕಿಗಳು ಎಲ್ಲರ ಚಪ್ಪಾಳೆ ಗಿಟ್ಟಿಸಿದವು. ಕುಮಾರಿ ನೀರಿಕ್ಷ "ಇವನೇನೋಡು ಅನ್ನದಾತ' ಹಾಡನ್ನು ಸುಂದರವಾಗಿ ಹಾಡಿದರೆ, ಕುಮಾರಿ ಸಿಂಧು ಹಾಡಿದ 'ಏರಿಸಿಹಾರಿಸಿ ಕನ್ನಡದ ಭಾವುಟ' ಹಾಡಂತೂ ದಿವಂಗತ ಕಾಳಿಂಗರಾಯರ ಧಾಟಿಯಲ್ಲೇ ಹಾಡಿದ್ದುಇಡೀ ಕಾರ್ಯಕ್ರಮಕ್ಕೆ ಇನ್ನಷ್ಟು ಕಳೆ ಕೊಟ್ಟಿತು ಕೊನೆಯಲ್ಲಿ ಎಲ್ಲರಿಗೂ ತಿಂಡಿ ತಿನಿಸುಗಳನ್ನುಹಂಚಿ, ಒಂದಿಷ್ಟು ಆಟಗಳೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು.
ಶಾಲೆಯ ಎಲ್ಲಾ ಜವಾಬ್ದಾರಿಗಳನ್ನು ಬಹಳ ಮುತುವರ್ಜಿಯಿಂದನಿರ್ವಹಿಸುತ್ತಿರುವ ಶಿಕ್ಷಕರಿಗೆ ಹೀಗೇ ಎಂದೆಂದಿಗೂ ಕನ್ನಡಿಗರ ಸಹಕಾರ ಪ್ರೋತ್ಸಾಹ ಒದಗಿಬರಲಿ ಎಂದು ಎಲ್ಲರ ಆಶೆ.