![]() | ರಜ ಮಜ ಪಿಕ್ ನಿಕ್ 2011ಕಾರ್ಯಕ್ರಮದ ಚಿತ್ರಗಳನ್ನು ನೊಡಲು ಇಲ್ಲಿ ಕ್ಲಿಕ್ ಮಾಡಿ |
ಸಿಡ್ನಿಯ ಬಿಸಿಲು ಕಾಲದ, ವರ್ಷ 2011 ರ, ಶನಿವಾರ 23 ರಂದು ಪ್ರತಿವರ್ಷದಂತೆ ರಜ ಮಜ ಪಿಕ್ ನಿಕ್ ಏರ್ಪಡಿಸಲಾಗಿತ್ತು.ಈ ವರ್ಷ Shaolhaven Heads ಹಾಗೂ Seven Mile Beach ಗಳಲ್ಲಿ ಒಂದು ದಿನದ ಪಿಕ್ ನಿಕ್ಕಿಗಾಗಿ ಸಂಭ್ರಮದಿಂದ ತಮ್ಮ ಸ್ಥಳ ಕಾದಿರಿಸಿದ್ದವರೆಲ್ಲರೂ ಬೆಳಗ್ಗೆ ಏಳುವರೆ ಗಂಟೆಗೇ ಸೇರಿದ್ದರು. ಸಮಯಕ್ಕೆ ಸರಿಯಾಗಿ ಬಂದ ಬಸ್ಸಿನಲ್ಲಿ ಎಲ್ಲರೂ ತಮ್ಮ ತಮ್ಮ ಬಂಧು ಮಿತ್ರರೊಡನೆ ಕುಳಿತರು.ಒಳ್ಳೆಯ ಹವಾಮಾನ ಇದ್ದುದರಿಂದ AC ಇಲ್ಲದಿದ್ದರೂ ಬಸ್ ಪ್ರಯಾಣ ತಂಪಾಗೇ ಇತ್ತು. ಶ್ರೀಮತಿ ಶಾರದಮ್ಮ ಅವರ ಜೈಕಾರಗಳಿಂದ ಮೊದಲುಗೊಂಡ ಪ್ರಯಾಣ, sandwitch ತಿನ್ನುತ್ತಲೇ ಕನ್ನಡ ಭಕ್ತಿಗೀತೆಯೊಂದಿಗೆ ಶುರುವಾದ ಹಾಡಿನ ಸರಮಾಲೆ ನಾನಾ ಭಾಷೆಯ ಮೋಜಿನ ಹಾಡುಗಳು ಕೇಳಿ ಬಂದವು. ಬಿಂಗೋ ಆಟ ಆರಂಭವಾಗಿ ಹದಿನೈದು ನಿಮಿಷವಾದರೂ ಯಾರೂ ಗೆಲ್ಲದಿದ್ದನ್ನು ಕಂಡು ಎಲ್ಲರಲ್ಲಿ ಆಶ್ಚರ್ಯ ಮೂಡಿತು. ನಂತರ ದಬದಬನೆ ಗೆಲುವಿನ ಉದ್ಗಾರ ಕೇಳಬಂದವು.ಮೊದಲು ಗೆದ್ದವರು ಸರಸ್ವತಿ, ನಂತರ ವಿಜಯಾ,ವಿಶಾಲ್,ಉಮೇಶ್,ರಾಧಿಕಾ,ಅನಿಲ್ ಹೀಗೇ ಒಟ್ಟು ಏಳು ಬಹುಮಾನ ಗೆದ್ದು ಸಂತೋಶದಿಂದ ಪ್ರಯಾಣ ಮುಂದುವರೆಸಿದೆವು.
ಬೆಳಗಿನ ತಿಂಡಿಗೆ Kiama ದಲ್ಲಿ ಬಸ್ಸನ್ನು ನಿಲ್ಲಿಸಲಾಯಿತು.ಬಿಸಿಬಿಸಿ ಉಪ್ಪಿಟ್ಟು ಕೇಸರಿಭಾತು ಸವಿದು, ಅಲ್ಲಿ ಸಮುದ್ರತೀರದ ಅಲೆಗಳ ಅಬ್ಬರ ಹೆಚ್ಚಾಗಿದ್ದುದರಿಂದ Blowholeನತ್ತ ಒಮ್ಮೆ ನೋಟ ಬೀರಿ ನಂತರ ಬಸ್ ಏರಿ Shaolhaven Heads ಕಡೆಗೆ ಪ್ರಯಾಣ ಮುಂದುವರೆಯಿತು.
ಹನ್ನೆರೆಡಕ್ಕೆ ಅರ್ಧ ಘಂಟೆ ಮುನ್ನವೇ Kayaking ಮಾಡುವ ಸ್ಥಳಕ್ಕೆ ಬಂದು ಸೇರಿದೆವು. ಮಕ್ಕಳಲ್ಲಿ ನಾಮುಂದು ತಾಮುಂದು ಎನ್ನುವ ಹಂಬಲ ಹುಮ್ಮಸ್ಸು ಎದ್ದು ಕಾಣಿಸುತ್ತಿತ್ತು. Kayak ಬಾಡಿಗೆಗೆ ಕೊಟ್ಟಿದ್ದ ಆಕೆ (Noni) ಎಲ್ಲರಿಗೂ ಐದಾರು ನಿಮಿಷ safety ಬಗ್ಗೆ ವಿವರಣೆ ನೀಡಿದಳು.ಮೊದಲು ಚಿಕ್ಕ ಮಕ್ಕಳು ನಂತರ ಪ್ರಾಯದ ಮಕ್ಕಳು Kayaking ನ ಅಪರೂಪದ ಅನುಭವ ಪಡೆದರು.ಕೆಲವರು ಈ ಮೊದಲೇ ಅದರ ಅನುಭವ ಪಡೆದಿದ್ದವರು ಸುಲಭವಾಗಿ ಸಾಗಿ ಬಂದರು.ದಂಪತಿಗಳು ಮಕ್ಕಳನ್ನು ಮಧ್ಯೆ ಕುಳ್ಳಿರಿಸಿಕೊಂಡು ಒಂದು ಸುತ್ತು ಹೋಗಿಬಂದರು.ಅಷ್ಟರಲ್ಲಿ ಮೊದಲು ಹೋದ ಗುಂಪಿನಲ್ಲಿದ್ದ ಆಶ್ರಯ್ ಮಾತ್ರ ವಾಪಸ್ ಬರಲು ಸಾಧ್ಯವಾಗಲಿಲ್ಲ.ನಾವುಗಳು ಬಂದಾಗ ಇದ್ದ ಗಾಳಿಯ ರಭಸ ಸ್ವಲ್ಪ ಜಾಸ್ತಿಯಾಗಿತ್ತು.ಕಷ್ಟಪಟ್ಟರೂ ಸಾಧ್ಯವಾಗದೇ ಆಶ್ರಯ್ ದೂರ ಸಾಗಿದ. ಅವನನ್ನು ಕರೆತರಲು ಹೋದ Noni ಸಹ ವಾಪಸ್ ಬಾರದ ಕಾರಣ ನಮಗೆಲ್ಲರಿಗೂ ಗಾಬರಿಯಾಗಿ, ಸಹಾಯಕ್ಕೆ000 ಗೆ ಫೋನ್ ಮಾಡಬೇಕಾಯಿತು.ಅವರು ಬಂದ ಕೆಲವೇ ನಿಮಿಷಗಳಲ್ಲಿ ಅವನ ಪತ್ತೆಯಾಯಿತು.ಸಧ್ಯ ಕ್ಷೇಮವಾಗಿ ಗುಂಪಿಗೆ ಅವನನ್ನು ಕರೆತರಲಾಯಿತು.ಆ ವೇಳೆಗೆ ಎಲ್ಲರ ಮುಖದಲ್ಲೂ ಆತಂಕ ಮೂಡಿತ್ತು.ದೇವರ ದಯೆಯೋ ನಮ್ಮೆಲ್ಲರ ಅದೃಷ್ಟವೋ ಎಂಬಂತೆ ಆ (ಕಹಿ)ಘಳಿಗೆ ಸಂತಸದಿಂದ ಕೊನೆಗೊಂಡಿತು.
ಅಲ್ಲಿಂದ ಮುಂದಕ್ಕೆ Seven Mile Beach ಬಳಿಯ ಒಂದು ಪಾರ್ಕ್ ನಲ್ಲಿ ತಂಪಾದ ಗಾಳಿ ಬೀಸುವ ಮರದಡಿಯ ನೆರಳಿನಲ್ಲಿ ಕುಳಿತು ಬಿಸಿಬೇಳೆಭಾತ್, ಮೊಸರನ್ನ ತಿನ್ನುತ್ತಾ ತಮ್ಮ ಹಾಗೂ ತಮ್ಮ ಸ್ನೇಹಿತರ ಅನುಭವಗಳನ್ನು ಹಂಚಿಕೊಂಡೆವು.ಮಕ್ಕಳು ಕೆಲವು ಆಟಗಳನ್ನು ಆಡಿದರೆ ಇನ್ಕೆಲವರು ಬೀಚ್ ವಾಕ್ ಮಾಡಿಬಂದರು.ಅಷ್ಟರಲ್ಲಾಗಲೇ ಸಮಯ 4.30 ಆಗಿತ್ತು.ಬಿಡುವಾಗಿದ್ದ ಹೆಂಗಸರೆಲ್ಲಾ ಸೇರಿ ಈರೂಳ್ಳಿ,ಟೊಮಾಟೋ,ಕೊತ್ತಂಬರಿ ಸೊಪ್ಪು ಟಕಟಕನೆ ಹೆಚ್ಚಿಕೊಟ್ಟ ಕಾರಣ ಬಲು ಬೇಗ ಭೇಲ್ ಪುರಿ ರೆಡಿಯಾಯಿತು.ಮಕ್ಕಳು ದೊಡ್ಡವರು ಎಲ್ಲರೂ ಇಷ್ಟಪಟ್ಟು ಎರಡು ಮೂರು ಬಾರಿ ಹಾಕಿಸಿಕೊಂಡು ಸವಿದರು.ನಂತರ ಬಿಸಿಬಿಸಿ ಕಾಫಿ, ಟೀ ಸಮಯಕ್ಕೆ ಹೇಳಿ ಮಾಡಿಸಿದ ಹಾಗೆ ಇತ್ತು.ಮನೆಗೆ ಹೊರಡಲು ಬಸ್ ಏರುವ ಮುನ್ನ ಎಲ್ಲರನ್ನೂ ಉದ್ದೇಶಿಸಿ ಶ್ರೀಯುತ ರುದ್ರಾರಾಧ್ಯ ಅವರು ಅಂದು ನಡೆದ ಘಟನೆಯ ಬಗ್ಗೆ ಎರಡು ಹಿತವಾದ ಕಿವಿಮಾತುಗಳನ್ನು ಪೋಷಕರಿಗೂ ಹಾಗೂ ವ್ಯವಸ್ಥಾಪಕರಿಗೂ ಆಡಿದರು.ಬಸ್ ಏರಿದ ಕೂಡಲೇ ಶ್ರೀ ನಾಗರಾಜ್ ಚಾಲಕನಿಗೆ ಎಂದಿನಂತೆ ಪುಟ್ಟ ಉಡುಗೊರೆಯೊಂದಿಗೆ ಧನ್ಯವಾದ ಅರ್ಪಿಸಿದರು.ಅಲ್ಲಿಂದ ಶುರುವಾದ ಅಂತ್ಯಾಕ್ಷರಿ ಲಿವರ್ಪೂಲ್ ನಲ್ಲಿ pizza ತೆಗೆದುಕೊಳ್ಳುವವರೆಗೂ ಮುಂದುವರೆಯುತ್ತಾ ಬಂದಿತು.
ಪ್ರತಿ ವರ್ಷಕ್ಕಿಂತ ಈ ವರ್ಷದ ರಜ ಮಜ ಪಿಕ್ ನಿಕ್ ಸಂಭ್ರಮ ಸಂತೋಷದಿಂದ ಇದ್ದರೂ ಆಶ್ರಯ್ ಕಳೆದು ಹೋಗಿದ್ದ ಆತಂಕದ ಘಳಿಗೆಯ ನಂತರ ಉಳಿದ ಸಮಯ ಸ್ವಲ್ಪ ಮಜ ಕಳೆದುಕೊಂಡಂತೆ ಅನಿಸಿತು