![]() | ಅಡುಗೆ ಮತ್ತು ಆರೋಗ್ಯಕಾರ್ಯಕ್ರಮದ ಚಿತ್ರಗಳನ್ನು ನೊಡಲು ಇಲ್ಲಿ ಕ್ಲಿಕ್ ಮಾಡಿ |
ವರದಿ - ಶ್ರೀ ದಿವಾಕರ್ ಹೇರಳೆ
ಘಮಘಮ ಸುಗಮ- ವಾರೆವ್ಹಾ ಬೂದುಗುಂಬಳಕಾಯಿ ಹಲ್ವ,
ಇಷ್ಟು ಸುಲಭನೇ ಕಾಶಿ ಹಲ್ವ ಮಾಡೋದು? ಅನ್ನುವಸ್ಟು ಸುಲಲಿತವಾಗಿ ತೋರಿಸಿದ್ದು ನಮ್ಮೆಲ್ಲರಿಗೂ ಚಿರಪರಿಚಿತರಾದ ವಿಜಯಾ ಐಭಟ್ ಅವರು.15/5/2010 ರ ಸಂಜೆ ಅಡುಗೆ ಮತ್ತು ಆರೋಗ್ಯ ಕಾರ್ಯಕ್ರಮದ ಅಂಗವಾಗಿ ಅಚ್ಚುಕಟ್ಟಾಗಿ ಸಿದ್ದವಾಗಿ ಬಂದಿದ್ರು. ಅಡುಗೆ ಕಾರ್ಯಕ್ರಮ ನಿರೂಪಣೆ ಅವರ ಗೆಳತಿ ಪೂರ್ಣಿಮ ಭಟ್ ಅವರಿಂದ, ಲಘು ಹಾಸ್ಯಬರಿತವಾಗಿ ಎಲ್ಲರ ನಗುವಿನೊಂದಿಗೆ ಆರಂಭವಾಯಿತು. ಚಳಿ, ಚಳಿಯಾಗಿದ್ದ ಹಾಲ್ ಕ್ರಮೇಣ ಸ್ಟೌ ಜ್ವಾಲೆಯಿಂದ ಬಿಸಿಯಾಗ್ತಾ ಹೋಯಿತು. ಬಿಸಿ ಬಾಣಲೆಗೆ ಮೊದಲು ತುಪ್ಪ ಸುರಿದ್ರು, ಮನೆಯಲ್ಲೇ ತುರಿದ ಬೂದುಗುಂಬಳಕಾಯಿ ತುರಿ (ಒತ್ತಿ ನೀರು ತೆಗೆದಿರಬೇಕು) ಹಾಕಿ ಹದ ಬೆಂಕಿಯಲ್ಲಿ ನಿಧಾನವಾಗಿ ಕಲಸೋದಕ್ಕೆ ಶುರು ಮಾಡಿದ್ರು, ಇದು ಸುಮಾರು ಹೊತ್ತು ತಗೊಳ್ಳೋದ್ರಿಂದ ಆ ಸಮಯದಲ್ಲಿ ಕೆಲವು ಸ್ಥಿರ ಚಿತ್ರ ಪ್ರದರ್ಶನ, ಗಂಡಸರಿಗೆ ಕ್ಯಾರೆಟ್ ಹೆಚ್ಚೋ ಸ್ಪರ್ಧೆ ಮತ್ತು ಹೆಂಗಸರಿಗೆ ಹಸಿ ಮೆಣಸಿನ ಕಾಯಿ ಹೆಚ್ಚೋ ಸ್ಪರ್ಧೆ, ಗೆದ್ದವರಿಗೆ ಸೋತವರಿಂದ ಬಹುಮಾನ ವಿತರಣೆ ಆಗ್ತಾ ಇದ್ದಹಾಗೆ ಹಲ್ವ ಸ್ತಯಾರಿ ಅಂತಿಮ ಹಂತಕ್ಕೆ ಬಂದಿತ್ತು ಕೋಣೆಯಲ್ಲ ಘಮ ಘಮ. ಅಂತಿತ್ತು .ಅದನ್ನ ಪ್ಲೇಟಿಗೆ ಸುರಿದು ಪಿಸ್ತ ಟಾಪಿಂಗ್ ಹಾಕಿ ಸುಂದರವಾಗಿ ಶ್ರಿಂಗಾರ ಮಾಡಿ ಸ್ಟೌ ಆರಿಸಿದಾಗಲೆ ಅಡುಗೆ ಕಾರ್ಯಕ್ರಮ ಮುಗಿಯಿತು.
ಸುಗಮ ಆರೋಗ್ಯ-ಕ್ಯಾನ್ಸರ್,
ಕೂಡಲೇ ಸಮಯ ವ್ಯರ್ಥ ಮಾಡದೇ ಡಾ. ರಾಜೀವ್ ರಾಮಕೃಷ್ಣ ಅವರನ್ನ ನಮ್ಮ ಹಿರಿಯ ಆಹಾರಪೋಷಕಾಂಶ ತಜ್ಞೆ ಶ್ರೀಮತಿ ರಾಜೇಶ್ವರಿಯವರು ಸಭೆಗೆ ಪರಿಚಯಿಸಿದರು. ಕನ್ನಡದವರೇ ಆದ Dr. Rajiv Ramakrishna ವೈದ್ಯಕೀಯ ಶಿಕ್ಷಣ ಮಾಡಿದ್ದು New Castle Medical School ನಲ್ಲಿ, ಅವರ ಸಂಶೋದನೆ ಕ್ಯಾನ್ಸರ್ ವಿಭಾಗದಲ್ಲಿ. ಅವರ ನಿರೂಪಣೆ ಸರಳ ಭಾಷೆಯಲ್ಲಿದ್ದು ಸಾಮಾನ್ಯ ಜನರಿಗೂ ಅರ್ಥ ಆಗುವ ಹಾಗಿತ್ತು. ಕ್ಯಾನ್ಸರ್ ಅಂದ್ರೆ ಏನು? ಹೇಗೆ ಯಾರಿಗೆ ಬರಬಹುದು? ಅನ್ನೋದನ್ನೆಲ್ಲ ವಿವರಿಸದ ಮೇಲೆ ವಿವಿದ ಕ್ಯಾನ್ಸರ್ ರೋಗಗಳಾದ lung, stomach, breast, colorectal, ovaries, prostate ಕ್ಯಾನ್ಸರ್ ಗಳು, lukemia ಹಾಗು ಇನ್ನಿತರ ಕ್ಯಾನ್ಸರ್ ಗಳ power point slideಗಳನ್ನು ತೋರಿಸಿ ವಿವರಿಸ್ತಾ ಇದ್ದಹಾಗೆ ಪ್ರೇಕ್ಷಕರೆಲ್ಲಾ ತದೇಕ ಚಿತ್ತದಿಂದ ಕಣ್ಣು ಮಿಟಕಸದೇ ನೋಡ್ತಾ ಇದ್ದಿದ್ದು ಕಂಡು ಬಂತು. ಧೂಮಪಾನ, ರಾಸಾಯನಿಕ ವಸ್ತುಗಳು, ವಿದ್ಯುತ್ ಅಯಸ್ಕಾಂತದ ತರಂಗಗಳು, ಅತಿಯಾದ ಕುಡಿತ, UV ಕಿರಣ, ಬೊಜ್ಜು, ಅಸಮರ್ಪಕ ಆಹಾರ ಕ್ರಮ, ವಂಶ ಪಾರಂಪರ್ಯ ಹಾಗೂ ಇನ್ನಿತರ Risk Factors ಬಗ್ಗೆ ವಿವರಣೆ ನೀಡಿದರು.
Cancer is not a death sentence!!,
ಪ್ರೇಕ್ಷಕರ ಬಹಳ ಗಮನ ಸೆಳೆದಂತಾ slide, ಹಲವು ವರ್ಷಗಳ ಹಿಂದೆ ಕ್ಯಾನ್ಸರ್ ಬಂತು ಅಂದ್ರೆ ಸಾವು ಬಂದಹಾಗೇ ಆದರೆ ಈಗ ಜನರ ತಿಳುವಳಿಕೆ ಜಾಸ್ತಿಯಾಗಿದೆ. ಹೊಸ ಅವಿಷ್ಕಾರಗಳು, ವಿವಿದ ಔಷಧಿಗಳು, ನೂತನ ತಪಾಸಣಾ ತಂತ್ರಗಳು ಸಾಮಾನ್ಯ ಜನರಿಗೂ ಆಸ್ಟ್ರೇಲಿಯದಲ್ಲಿ ಲಭ್ಯಯಿರೋದ್ರಿಂದ ಧೈರ್ಯಗೆಡದೆ ತಡಮಾಡದೇ ವೈದ್ಯರನ್ನು ಕಾಣುವ ಮನೋಧರ್ಮವನ್ನು ಬೆಳೆಸಿಕೊಳ್ಳಬೇಕು, ಕ್ಯಾನ್ಸರ್ ಅಂದರೆ ಬರೇ ಸಾವಲ್ಲ ಅನ್ನುವ ಅಭಿಪ್ರಾಯ ನೆರೆದಿದ್ದ ಜನರಿಗೆಲ್ಲ ಬಂದಿದ್ರೆ ಏನೂ ವಿಷೇಷವೇನಲ್ಲ.
ಅರಿಶಿಕ್ಕೂ ಕ್ಯಾನ್ಸರ್ ಗೂ ಏನು ಸಂಬಂಧ?,
"ನೀವೆಲ್ಲಾ ಮಿತವಾಗಿ ಸಂತೋಷವಾಗಿ ಕಾಶಿಹಲ್ವ ತಿನ್ನಿ ಆದರೆ Indian Spiceಗಳನ್ನ ತಿನ್ನೋದನ್ನ ಮರೀಬೇಡಿ" ಅಂದಾಗ ಕುತೂಹಲ ಇನ್ನೂ ಹೆಚ್ಚಾಯಿತು. ಅನಾದಿ ಕಾಲದಿಂದಲೂ ಭಾರತದಲ್ಲಿ ಉಪಯೋಗಿಸುವ ಅರಿಶಿನದಲ್ಲಿರುವ ಕರ್ ಕ್ಯುಮಿನ್ ಅನ್ನುವ ರಾಸಾಯನಿಕಕ್ಕೆ ಕ್ಯಾನ್ಸರ್ ನ್ನು ಎದುರಿಸುವ ಸಾಮರ್ಥ್ಯ ಇದೆ ಎಂದು ಸಂಶೋದನೆಗಳಿಂದ ಧೃಢಪಟ್ಟಿರುವುದಾಗಿ ಇನ್ನೊಂದು slideನಲ್ಲಿ ತೋರಿಸಿದಾಗ ನಮಗೆಲ್ಲಾ ನಮ್ಮ ಹಿರಿಯರ ಬಗ್ಗೆ ಬಹಳ ಹೆಮ್ಮೆಯಾಯಿತು.
Questions & Answers,
ಈ ಬಾರಿ ಸುಗಮ ಆರೋಗ್ಯದಲ್ಲಿ ಕಂಡುಬಂದತಹ ಒಂದು ಮಾರ್ಪಾಡಂದ್ರೆ ಪ್ರಶ್ನೆಗಳನ್ನು ಬರೆದು ಕಳಿಸಿದ್ದರಿಂದ ತುಂಬಾ ಸಮಯ ಉಳಿತು ಅನ್ನಬಹುದು. ಚೀಟಿಯಲ್ಲಿದ್ದ ಒಂದೊಂದೇ ಪ್ರಶ್ನೆಯನ್ನು ಡಾಕ್ಟರೇ ಓದಿ ಅದಕ್ಕೆ ಸರಿಯಾದ ಉತ್ತರ ಅಥವಾ ಪರಿಹಾರಗಳನ್ನ ಪಟಪಟನೆ ನೀಡುತ್ತಾ ಹೋದ್ರು . ಹಾಗಿದ್ರೂ ಕೆಲ ಸಭಿಕರು ಹಲವು ಪ್ರಶ್ನೆಗಳನ್ನು ಮಾತಿನಲ್ಲೇ ಕೇಳಿದರು. ನಂತರ ರಾಜಿವ್ ರವರಿಗೆ, ವಿಜಯಾರವರಿಗೆ ಹಾಗೂ ಪೂರ್ಣಿಮರವರಿಗೆ ನೆನಪಿನ ಕಾಣಿಕೆ ನೀಡಲಾಯಿತು.
Life itself is a Death Sentance? ,
ನಮಗೆಲ್ಲಾ ಆಧ್ಯಾತ್ಮದ ಒಳನೋಟ, ಮಾರ್ಗದರ್ಶನ ನೀಡುವ ಶ್ರಿ ಅಶೋಕ್ ರವರು ಕೊನೆಯಲ್ಲಿ ಮಾತಾಡ್ತಾ ಹೀಗೆ ಹೇಳಿದಾಗ ಹಲವರು ಹೌದು-ಹೌದು ಅಂತ ತಲೆ ಅಲ್ಲಾಡಿಸಿದರು. ಇದರ ಅರ್ಥ ನಾವು ಹುಟ್ಟುವಾಗ Death warrant ಜೊತೆಯಲ್ಲೆ ಇರುತ್ತೆ ಅಂತ. ಮುಂದೆ ಅವರು "ವೈದ್ಯೋ ನಾರಾಯಣೋ ಹರಿಃ" ಯಾಕೆ ಹೇಳ್ತೀವಿ, ನಮ್ಮ ಸಮಾಜದಲ್ಲಿ ವೈದ್ಯರನ್ನ ದೇವಸಮಾನರಾಗಿ ನೋಡುವ ಪ್ರಾಮುಖ್ಯತೆಯನ್ನ ಅರ್ಥವತ್ತಾಗಿ ವಿವರಿಸಿದರು. ಕ್ಯಾನ್ಸರ್ ಹೆಮ್ಮಾರಿಯಿಂದ ತಾವೇ ಕಣ್ಣಾರೆ ಕಂಡ ದಾರುಣ ಕಥೆಯೊಂದನ್ನ ಹೇಳಿದಾಗ ಸಭೆ ನಿಶ್ಯಬ್ಧವಾಯಿತು.
ನಾರಾಯಣ್ ರವರ ವಂದನಾರ್ಪಣೆಯಿಂದ ಸಾಂಕೇತಿಕವಾಗಿ ಸಭೆ ಮುಕ್ತಾಯವಾದ್ರೂ ಎಲ್ಲರ ಕಣ್ಣು ಗುಂಬಳಕಾಯಿ ಹಲ್ವ ಹುಡುಕ್ತಾಇತ್ತು, ಕೊನೆಗೆ ಊಟದ ಜೊತೆಯಲ್ಲಿ ಸಿಗಬಹುದು ಅನ್ನುವ ತಾತ್ಕಾಲಿಕ ನೆಮ್ಮದಿಯಿಂದ ಸರತಿಸಾಲಲ್ಲಿ ನಿಂತು ಬಿಟ್ವಿ, ನೆಮ್ಮದಿ ಭಂಗವಾಗಲಿಲ್ಲ, ಹಲ್ವ ಸಿಕ್ತು. ರಾಜಿಯವರ ಪುಳಿಯೋಗರೆ, ಶ್ರೀಮತಿ ವಂದನಾರವರ special salad ಒಂದು ತರಹ "ಬಹುತ್ ಸುಂದರ್ ತಾಳ್ ಮೇಳ್"