![]() | ರಜ ಮಜ ಪಿಕ್ ನಿಕ್ 2010ಕಾರ್ಯಕ್ರಮದ ಚಿತ್ರಗಳನ್ನು ನೊಡಲು ಇಲ್ಲಿ ಕ್ಲಿಕ್ ಮಾಡಿ |
ಕಳೆದ ಎರಡು ವರ್ಷಗಳಿಂದ ಯಶಸ್ವಿಯಾಗಿ ಮೋಜು ಮಜಭರಿತವಾಗಿ ತುಂಬಿದ ರಜ ಮಜ ಪಿಕ್ ನಿಕ್ 2010 ಜನವರಿ 16 ರಂದು ಹಮ್ಮಿಕೊಂಡಿದ್ದ Shell Cove ಮತ್ತು Windang Island Walk ಭಾಗವಹಿಸಿದವರಿಗೆ ಸಖತ್ ಮಜ ಕೊಟ್ಟಿತ್ತು. ಬೆಂಡಿ ಬಸ್ ನಲ್ಲಿ ಬೆಳಿಗ್ಗೆ ಲಿವರ್ಪೂಲ್ ನಿಂದ ಹೊರಟ ನಮಗೆ ಕುಳಿತು ಕೊಳ್ಳುತ್ತಿದ್ದ ಹಾಗೇ ತಿನ್ನಲು ಡೊನಟ್ ಕೊಡಲಾಯಿತು. ಮರು ಕ್ಷಣವೇ ಬಿಂಗೋ ಆಟ ಎಲ್ಲರನ್ನೂ ಸೀಟುಗಳ ಮೇಲೆ ಕೂಡದ ಹಾಗೆ ಕುತೂಹಲ ಕೆರಳಿಸುವಂತಿತ್ತು.ಗೆದ್ದವರ ಖುಷಿಗೆ ಪಾರವೇ ಇಲ್ಲದಂತಾಗಿತ್ತು.
ಇನ್ನು Sublime Lookoutನಲ್ಲಿ ಬಿಸಿಬಿಸಿ ಉಪ್ಪಿಟ್ಟು ಕೇಸರೀಭಾತ್ ಸಿಕ್ಕಾಗ ಆ ಬೆಟ್ಟಗಳ ಮಧ್ಯೆ ಮಂಜುಕವಿದ ವಾತಾವರಣಕ್ಕೆ ಹೇಳಿಮಾಡಿಸಿದ ಹಾಗಿತ್ತು. Shell Cove ಬೀಚ್ ನಲ್ಲಿ ಸುಮಾರು ಎರಡುತಾಸು ಜಲಕ್ರೀಡೆ ಆಡಿದ ಮೇಲೆ ದಣಿದ ದೇಹಕ್ಕೆ ಬಿಸಿಬೇಳೆ ಭಾತ್ ಮೊಸರನ್ನ ಕಾದಿದೆ ಎಂದಾಗ ಖುಷಿಯಾಯಿತು ಆದರೆ ಆಯೋಜಕರು ಮೊಸರನ್ನ ಮಾತ್ರ ಮನೆಯಲ್ಲೇ ಬಿಟ್ಟು ಬಂದದ್ದು ಮೊದಲು ಸ್ವಲ್ಪ ಬೇಸರವಾದರೂ ಉಳಿದದ್ದು ಸಾಕಷ್ಟು ಇದ್ದುದರಿಂದ ಮಧ್ಯಾನ್ಹದ ಊಟ ಕಡಿಮೆ ಅನ್ನಿಸಲೇ ಇಲ್ಲ.
ಮತ್ತೆ ಬಸ್ ಏರಿ ಒಂದೂವರೆ ಘಂಟೆ ಅವಧಿಯ Windang Island Walk ಗೆ ಹೊರಡಲು ಯಾರ್‍ಯಾರು ಬರಲು ಸಿದ್ಧ ಎಂದು ಕೇಳಿದಾಗ ಪುಟ್ಟ ಮಕ್ಕಳ ಪೋಷಕರನ್ನು ಬಿಟ್ಟುಳಿದವರೆಲ್ಲಾ ಸೈ ಅಂದರು.ಕಲ್ಲು ಬಂಡೆ ಝಲ್ ಎಂದು ದಂಡೆಗೆ ಬಡಿಯುವ ಅಲೆ ಎಲ್ಲವನ್ನೂ ನೋಡುತ್ತಾ ಪುಟ್ಟ ದ್ವೀಪದ ಮೇಲೆ ಏರಲು ಸಮುದ್ರದ ಸುಂದರ ನೋಟ ಸುತ್ತಲೂ ಕಣ್ತುಂಬಿತ್ತು. ವಾಪಸ್ ಬಸ್ಸಿನೆಡೆಗೆ ನಡೆದು ಬರುತ್ತಿದ್ದಹಾಗೇ ರುಚಿರುಚಿಯಾದ ಭೇಲ್ ಪುರಿ ಸಿದ್ಧವಾಗಿತ್ತು. ಕಾಫಿ ಸ್ವಲ್ಪ ತಡವಾಗಿ ತಯಾರಾಗುವ ಸಮಯದಲ್ಲಿ ಹುಲ್ಲಿನಮೇಲೆ ಸುತ್ತಲೂ ಕುಳಿತು ಡಂ ಶೆರಾಡ್ಸ್ ಆಟ ನೋಡಲು ಮಜ ಕೊಟ್ಟಿತು.
ಮನೆಗೆ ಬರುವ ಪ್ರಯಾಣದ ಸಮಯ ಮರೆಯಲಾಗದ ಅನುಭವವೇ ಸರಿ. ಹಾಡುತ್ತಾ,ಕುಣೀಯುತ್ತಾ,ರೇಗಿಸುತ್ತಾ,ಆಡಿದ ಅಂತಾಕ್ಷರಿ ಆಟ ಹೊರಟಾಗ ಶುರುವಾದದ್ದು ಲಿವರ್ಪೂಲ್ ಬಂದು ಸೇರಿ Pizza ತಿನ್ನುವವರೆಗೂ ಮುಗಿಯಲೇ ಇಲ್ಲ.ಈ ಬಾರಿ ಪಿಕ್ ನಿಕ್ ಗೆ Canberra ದಿಂದಲೂ ಒಂದು ಕುಟುಂಬ ಬಂದು ನಮ್ಮೊಂದಿಗೆ ಇದ್ದದ್ದು ಮತ್ತೊಂದು ಖುಷಿ ನೀಡಿದ ಸಂಗತಿ.