![]() | ಹೊಸವರ್ಷದ ಮನರಂಜನಾ ಸಂಜೆಕಾರ್ಯಕ್ರಮದ ಚಿತ್ರಗಳನ್ನು ನೊಡಲು ಇಲ್ಲಿ ಕ್ಲಿಕ್ ಮಾಡಿ |
2009 ಹೊಸವರ್ಷದ ಆಗಮನವನ್ನು ಸುಗಮ ಗಾನ ಸಮಾಜದ ಆಶ್ರಯದಲ್ಲಿ ಮೋಜು ಮನರಂಜನೆಗಳನ್ನೊಳಗೊಂಡಂತೆ ಸಂಗೀತಮಯ ರಸ ಸಂಜೆ ಒಂದನ್ನು ವಾಟಲ್ ಗ್ರೋವ್ ಶಾಲೆಯ ಆವರಣದಲ್ಲಿ ಏರ್ಪಡಿಸಲಾಗಿತ್ತು.ನಿರೀಕ್ಷೆಗೂ ಮೀರಿ ನೆರೆದಿದ್ದ ಜನ ಸಂದಣಿಗೆ ಹಳೇ ಮಧುರ ಗೀತೆಗಳ ಜೊತೆಗೇ ಹೊಸ ಚಿತ್ರಗೀತೆಗಳನ್ನು ಕೇಳುವ ಅದೃಷ್ಟ ಒದಗಿ ಬಂದಿತ್ತು.
ಸಮಾಜದ ನೆಚ್ಚಿನ ಜನಪ್ರಿಯ ಗಾಯಕರಾದ ಶ್ರೀ ಚೇತನ್,ಶ್ರೀಮತಿ ರೇಖಾ,ಶ್ರೀಮತಿ ಮತ್ತು ಶ್ರೀ ಪ್ರೇಮ ನಾಗರಜ್,ಶ್ರೀ ದೀಪಕ್,ಶ್ರೀ ಆಂತೊನಿ ಮತ್ತು ಶ್ರೀಮತಿ ಶೋಭಾ ಅವರುಗಳ ಜೊತೆಗೂಡಿ ಶ್ರೀ ಸುಬ್ರಮಣಿ ರಾಜ್,ಶ್ರೀ ಮತಿ ಮತ್ತು ಶ್ರೀ ವಿಜಯಾ ಮಂಜು,ಶ್ರೀಮತಿ ಕುಸುಮ,ಶ್ರೀಮತಿ ಮತ್ತು ಶ್ರೀ ನಾರಾಯಣ ಕಾರ್ಯಕ್ರಮಕ್ಕೆ ಹೊಸ ಮತ್ತು ಹಳೇಯ ಹಾಡುಗಳ ರಸದೌತಣವಿತ್ತರು.
ಕನ್ನಡದ ಹೆಸರಾಂತ ಕವಿ ಕುವೆಂಪುರವರ ರಚನೆಯಾದ ‘ಎಲ್ಲಾದರು ಇರು’ ಹಾಡನ್ನು ಶ್ರಿ ದಿವಾಕರ್,ಶ್ರೀಶಂಕರ ಮಧ್ಯಸ್ಥ ,ಶ್ರೀ ದಕ್ಷಿಣಾ ಮೂರ್ತಿ ಮತ್ತು ಕುಮಾರಿ.ಮಿಲಿ ಅವರುಗಳು ಹಾಡಿ ಎಲ್ಲರಲ್ಲೂ ಕನ್ನಡ ತನದ ಚೇತನವನ್ನು ಮತ್ತಷ್ಟು ಹೆಚ್ಚಿಸಿದರು.ಗಾಯಕರು ವೇದಿಕೆಯ ಮೆಟ್ಟಿಲೇರಿ ಬರುವ ಸಮಯವನ್ನು ವ್ಯರ್ಥವಾಗದಂತೆ ಶ್ರೀ ನಾಗೇಂದ್ರ,ಶ್ರೀ ದಕ್ಷಿಣಾ ಮೂರ್ತಿ ಮತ್ತು ಶ್ರೀ ನಾರಾಯಣ ಅವರು ಚಿಕ್ಕ ಹಾಸ್ಯ ಚಟಾಕೆಗಳನ್ನು ಹಾರಿಸಿ ಉಪಯೋಗಿಸಿಕೊಂಡರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬೆಂಗಳೂರಿನ ಹೆಸರಾಂತ ‘ಬ್ಲೂ ಬಾಯ್ಸ್ ಆರ್ಕೆಸ್ಟ್ರಾ’ ದ ಶ್ರೀ ಜೈಸಿಂಗ್ ಮತ್ತು ಶ್ರೀಮತಿ ಜಯಶ್ರೀ ಸಿಂಗ್ ಸ್ಥಳೀಯ ಕಲವಿದರನ್ನು ಮೆಚ್ಚಿದರು.
ಶ್ರೀಮತಿ ಜಯಶ್ರೀ ಸಿಂಗ್ ಸ್ಥಳೀಯ ಕಲಾವಿದರ ಜೊತೆಗೂಡಿ ಕೆಲ ಹಿಟ್ ಹಾಡುಗಳನ್ನು ಪ್ರೇಕ್ಷಕರಿಗೆ ಹಾಡಿ ರಂಜಿಸಿದರು,ಅದರಲ್ಲೂ ಶ್ರೀಮತಿ ಜಯಶ್ರೀ ಸಿಂಗ್ ಹಾಡಿದ ‘ಬಾನಲ್ಲು ನೀನೆ’,‘ನ ಧೀಂ ಧೀಂ ತನ’,‘ಕರಿಯಾ ಐ ಲವ್ ಯು’ ಮತ್ತು ‘ದೂರದಿಂದ ಬಂದಂತ’ ಹೆಚ್ಚಿನ ಚಪ್ಪಳೆ ಗಿಟ್ಟಿಸಿತು.ಸಿಡ್ನಿಯಲ್ಲೇ ಈಗಷ್ಟೇ MBA ಮುಗಿಸಿರುವ ಅವರ ಪುತ್ರಿ ಕುಮಾರಿ.ಶೃತಿ ಕೂಡಾ ತಾಯಿಯಂತೆ ಸೊಗಸಾದ ಕಂಠದಲ್ಲಿ ‘ಚೆಲುವಿನ ಚಿತ್ತಾರ’ ಚಿತ್ರದ ‘ಉಲ್ಲಾಸದ ಹೂಮಳೆ’ ಹಾಡನ್ನು ಹಾಡಿ ಎಲ್ಲರ ಮೆಚುಗೆಗೆ ಪಾತ್ರರಾದರು.
ಉಚಿತ ಪ್ರವೇಶವಾಗಿದ್ದ ಈ ಕಾರ್ಯಕ್ರಮ ಎಲ್ಲೂ ಬೋರ್ ಅನಿಸದೆ, ಅಂತ್ಯದಲ್ಲಿ ನೆರೆದಿದ್ದವರೆಲ್ಲರಿಗೂ ರುಚಿಕರವಾದ ಬಿಸಿ ಬಿಸಿ ಪಾವ್ ಭಾಜಿ ಹಂಚಲಾಯಿತು