![]() | ಯೋಗ ಶಿಬಿರ |
ಸ್ನೇಹಿತರೇ ,
2008 ರ ಮಾರ್ಚ್ - ಏಪ್ರಿಲ್ ತಿಂಗಳಿನಲ್ಲಿ ನಡೆದ ಯೋಗ,ಪ್ರಾಣಾಯಾಮ ಮತ್ತು ಧ್ಯಾನ ಶಿಬಿರದ ಪುಟ್ಟ ವರದಿಯನ್ನು ತಮ್ಮ ಮುಂದಿಡುತ್ತಿದ್ದೇವೆ. ಪ್ರವಾಸಕ್ಕಾಗೆ ತಮ್ಮ ಕುಟುಂಬದವರನ್ನು ಕಾಣಲೆಂದು ಬಂದ, ಭಾರತದಲ್ಲಿ ರಾಷ್ಟ್ರಮಟ್ಟದ ಪುರಸ್ಕಾರ ಪಡೆದ ಯೋಗಾಚಾರ್ಯ ಶ್ರೀ ಸಿ.ವಿ.ರುದ್ರಾರಾಧ್ಯ ಅವರು ನಡೆಸಿಕೊಟ್ಟ ಉಚಿತ ಯೋಗ ಶಿಬಿರ ಸುಮಾರು ಐವತ್ತು ಅರವತ್ತು ಮಂದಿಗೆ ಬಲು ಪ್ರಯೋಜನಕಾರಿಯೂ, ಸುಲಭವಾಗಿ ಅರೋಗ್ಯ ಕಾಪಾಡಿಕೊಳ್ಳುವ ವಿಧಾನಗಳೂ ಕೇವಲ ಐದೇ ವಾರಗಳಲ್ಲಿ ಲಭಿಸಿದವು. ಪುರುಷರೂ ಮತ್ತು ಮಹಿಳೆಯರೂ ಈ ತರಬೇತಿ ಶಿಬಿರಕ್ಕೆ ಹಾಜರಾಗಿದ್ದು,ಪ್ರತೀ ಭಾನುವಾರ ಸತತ ಐದು ವಾರಗಳು,ದಿನಕ್ಕೆ ಎರಡು ಘಂಟೆಗಳ ಕಾಲ ನಡೆಯಿತು.
ಯೋಗಾಭ್ಯಾಸ,ಪ್ರಾಣಾಯಾಮ ಧ್ಯಾನವಷ್ಟೇ ಅಲ್ಲದೆ ಆರೋಗ್ಯಕರ ಆಹಾರಸೇವನೆ,ಮನುಜನ ಆತ್ಮಾವಲೋಕನ ಮಾಡಿಸುವ ಆಧ್ಯಾತ್ಮ ಚಿಂತನೆ,ಉತ್ತಮ ಉದಾಹರಣೆಗಳು,ವಚನ ಸಾಹಿತ್ಯದ ಅರ್ಥ ಸಾರಾಂಶಗಳೂ,ಮಾನಸಿಕ ಒತ್ತಡ ನಿವಾರಣೆಗೆ ಸಲಹೆಗಳು ತರಬೇತಿಯ ಮುಖ್ಯ ಅಂಶಗಳಾಗಿ ತಿಳಿಸಿಕೊಟ್ಟರು.ಯೋಗಾಭ್ಯಾಸ,ಪ್ರಾಣಾಯಾಮ ಧ್ಯಾನವಷ್ಟೇ ಅಲ್ಲದೆ ಆರೋಗ್ಯಕರ ಆಹಾರಸೇವನೆ,ಮನುಜನ ಆತ್ಮಾವಲೋಕನ ಮಾಡಿಸುವ ಆಧ್ಯಾತ್ಮ ಚಿಂತನೆ,ಉತ್ತಮ ಉದಾಹರಣೆಗಳು,ವಚನ ಸಾಹಿತ್ಯದ ಅರ್ಥ ಸಾರಾಂಶಗಳೂ,ಮಾನಸಿಕ ಒತ್ತಡ ನಿವಾರಣೆಗೆ ಸಲಹೆಗಳು ತರಬೇತಿಯ ಮುಖ್ಯ ಅಂಶಗಳಾಗಿ ತಿಳಿಸಿಕೊಟ್ಟರು.
ಶ್ರೀ ರುದ್ರಾರಾಧ್ಯ ಅವರ ಸೊಸೆ ಶ್ರೀಮತಿ ಸುರೇಖಾಅನಿಲ್ ರವರೂ ಸಹ ಅತ್ಯಂತ ಒಳ್ಳೇಯ ತರಬೇತಿ ಪಡೆದವರಾಗಿದ್ದು ಮುಂದೆ ಪ್ರತಿ ವಾರಕ್ಕೊಮ್ಮೆ ಈ ಆರೋಗ್ಯಕರ ತರಗತಿಯನ್ನು ಮುಂದುವರೆಸಿಕೊಂಡು ಹೋಗುವ ಯೋಜನೆ ಇದ್ದು ಆಸಕ್ತರು ಸಮಿತಿಯವರನ್ನು ಸಂಪರ್ಕಿಸಬೇಕಾಗಿ ಕೋರಲಾಗಿದೆ.