![]() | ಹೊಟ್ಟೇ ತುಂಬಾ ನಕ್ಕುಬಿಡಿಕಾರ್ಯಕ್ರಮದ ಚಿತ್ರಗಳನ್ನು ನೊಡಲು ಇಲ್ಲಿ ಕ್ಲಿಕ್ ಮಾಡಿ |
ನಮ್ಮ ಸುಗಮ ಹಾಸ್ಯ ತಂಡದಲ್ಲಿ ಹತ್ತಾರು ಕಲಾವಿದರು ಇದ್ದು, ಆಗಿಂದಾಗ್ಗೆ ಸೇರಿ ನಗುನಗುತ್ತಾ ನಗಿಸಿ, ನಲಿಸಿ, ನೋವ ಮರೆಸುವ, ನೂತನ ಸ್ಪೂರ್ತಿ ನೀಡುವ, ನವನವೀನ ಗುಂಪು ಇದು. ನವರಸಗಳಲ್ಲೊ೦ದಾದ ಹಾಸ್ಯವೇ ಇಲ್ಲಿನ ಮೂಲ ವಸ್ತು.
ನಗುವಿನಿಂದ ಮುಖಕ್ಕೆ ಮೆರಗು, ಮನಕ್ಕೆ ಮುದ, ದೇಹಕ್ಕೆ ಆರೋಗ್ಯ, ನಕ್ಕರೆ ಅದೇಸ್ವರ್ಗ. ಇಂಥಾ ನಗು ಅನುಭವಿಸಲು ಬೇಕು ಹಾಸ್ಯ ! ಎಲ್ಲಿದೆ? ಎಲ್ಲಿದೆ ಈ ಹಾಸ್ಯ? ಬನ್ನಿ, ಈ ಪುಟವನ್ನು ಒಮ್ಮೆ ತಿರುವು ಹಾಕಿ, ನಿಮಗೂ ಹಾಸ್ಯದ ಅನುಭವ ಅಥವಾ ಹಾಸ್ಯ ಚಟಾಕಿಗಳು ತಿಳಿದಲ್ಲಿ ಎಲ್ಲರೊಂದಿಗೆ ಹಂಚಿಕೊಳ್ಳಿರಿ.
ಈವರಗೆ, ಸಿಡ್ನಿಯ ಕನ್ನಡಿಗರ ಬೇರೂರಾದ ಲಿವರ್ ಪೂಲ್ ನಲ್ಲಿ ನಡೆದ ಹಾಸ್ಯ ಸಂಜೆ ಕಾರ್ಯಕ್ರಮಗಳಿಂದಾಯ್ದ ಕೆಲವು ಭಾವ ಚಿತ್ರಗಳೂ ಹಾಗು ಆಯ್ದ ನಗೆ ಗುಳಿಗೆಗಳನ್ನು ಕೆಳಗೆ ಕಾಣಬಹುದು.