ಸಂಪರ್ಕಿಸಿ
ಕಾರ್ಯಕ್ರಮಗಳು
ಮುಖಪುಟ
ನುಚ್ಚಿನುಂಡೆ
ಬೇಕಾಗುವ ಸಾಮಗ್ರಿಗಳು
ತೊಗರಿ ಬೇಳೆ ಅರ್ಧ ಕಿಲೋ
ಕಡಲೆ ಬೇಳೆ ನೂರು ಗ್ರಾಂ
ತೆಂಗಿನ ಕಾಯಿ ತುರಿ ಒಂದು ಲೋಟ
ಹಸಿ ಮೆಣಸಿನ ಕಾಯಿ ಹತ್ತು
ಶುಂಟಿ ಗೋಲಿ ಗಾತ್ರ
ಕೊತ್ತಂಬರಿ ಒಂದು ಕಂತೆ
ಐದು ಎಳಸು ಕರಿಬೇವು
ಜೀರಿಗೆ ಒಂದು ಚಮಚ
ಉಪ್ಪು ಒಂದೂವರೆ ಚಮಚ
ಮಾಡುವ ವಿಧಾನ
ಬೇಳೆಗಳನ್ನು ತೊಳೆದು ನಾಲ್ಕು ಘಂಟೆ ನೆನೆಸಿ ನಂತರ ತರಿತರಿಯಾಗಿ ರುಬ್ಬಿಕೊಳ್ಳಿ
ರುಬ್ಬಿದ ಹಿಟ್ಟಿಗೆ ತೆಂಗಿನತುರಿ,ಶುಂಟಿ,ಹ.ಮೆ.ಕಾಯಿ ಹಾಕಿ ಮತ್ತೆರುಬ್ಬಿ
ಹೆಚ್ಚಿದ ಕೊತ್ತಂಬರಿ,ಕರಿಬೇವು,ಜೀರಿಗೆ,ಉಪ್ಪು ಸೇರಿಸಿ
ಕೈ ಹಿಡಿಯಲ್ಲಿ ಉಂಡೆ ಮಾಡಿ ಇಡ್ಲಿಯಂತೆ ಹತ್ತು/ಹದಿನೈದು ನಿಮಿಷ ಹಬೆಯಲ್ಲಿ ಬೇಯಿಸಿ
ಬೆಂದ ಉಂಡೆಗೆ ಬಿಸಿಯಲ್ಲೇ ತುಪ್ಪ ಸವರಿ ತಿನ್ನಲು ಕೊಡಿ ನೀವೂ ತಿನ್ನಿ
ಮತ್ತಷ್ಟು ಪಾಕವಿಧಾನಗಳು
ದಕ್ಷಿಣ ಭಾರತ ತಿನಿಸುಗಳು ವಿಭಾಗದ ಮತ್ತಷ್ಟು ಪಾಕವಿಧಾನಗಳು
ಹೆಸರುಕಾಳು ಹುಳಿ/ಪದಂಜಿ ಕೊದ್ದೆಲ್
ಖರ್ಜೂರ ಸುಕುನುಂಡೆ
ಅರಳು ಸುಕುನುಂಡೆ
ಹೆಸರುಬೇಳೆ ಸುಕುನುಂಡೆ
ಕಡ್ಲೆ ಕಾಯಿ ಉಂಡೆ