ಅಡುಗೆ ಮಾಡುವುದೂ ಒಂದು ಕಲೆ. ನಮ್ಮ ಸಿಡ್ನಿ ಸಮುದಾಯದಲ್ಲೇ ಸಾಕಷ್ಟು ಮಂದಿ ನಮ್ಮೂರಿನ ಕೆಲವು ಸಿಹಿ ತಿಂಡಿ ತಿನಿಸುಗಳನ್ನು ಮಾಡುವುದರಲ್ಲಿ ನಿಸ್ಸೀಮರು. ಅಂತಹ ಬಲ್ಲವರನ್ನು ಬರಮಾಡಿ ಬಾರದವರಿಗೆ ಮಾಡಿತೋರಿಸಿ ಅವರಿಗೂ ಹೊಸ-ಬಿಸಿ-ರುಚಿಗಳನ್ನೂ, ಮಾಡುವ ವಿಧಾನಗಳನ್ನೂ ಹಂಚಲು ಹಮ್ಮಿಕೊಂಡಿರುವ ಕಾರ್ಯಕ್ರಮವೇ ಘಮ ಘಮ ಸುಗಮ.
ನಿಮಗೂ ಯಾವುದಾದರೂ ನಿಮ್ಮೂರಿನ ಹೊಸ-ಬಿಸಿ-ರುಚಿ ಗೊತ್ತಿದೆಯೇ? ಗಂಡಸರೂ ಹೆಂಗಸರೂ ಹಾಗೂ ಮಕ್ಕಳಿಗೂ ಅವಕಾಶ ಉಂಟು. ಪ್ರತಿಬಾರಿ ಅಡುಗೆ ಮಾಡಿ ತೋರಿಸುವವರಿಗೆ ಬಹುಮಾನ ಉಂಟು. ಘಮ ಘಮ ಸುಗಮಕ್ಕೆ ನೋಂದಣಿ ಉಚಿತ!!
ಕರ್ನಾಟಕದ ಕೆಲವು ಅಡುಗೆ ತಿನಿಸುಗಳನ್ನು ಈ ಪುಟದಲ್ಲಿ ಕಾಣಬಹುದು. ತಮಗೂ ತಮ್ಮೂರಿನ ತಿನಿಸು ತಿಳಿದಿದ್ದರೆ ತಪ್ಪದೆ ತಿಳಿಸಿ.