ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಭಾವಗೀತೆ (ದ)

ದೇಹಕಿರುವ ಆತ್ಮದಂತೆ

ದೇಹಕಿರುವ ಆತ್ಮದಂತೆ

ನಮ್ಮ ಬುವಿಗೆ ಪರಿಸರ

ಉಳಿಸಿ ಬೆಳೆಸಿ ಕೊಂಡರೇನೇ

ನಮ್ಮ ಬದುಕು ಸುಂದರ |

ಇಲ್ಲದಿರೆ ಕಂದರ ||

ಉಣಿಸಿ ತಿನಿಸಿ ಬೆಳೆಸುತೇವೆ

ನಮ್ಮ ಮುದ್ದು ಮಕ್ಕಳ

ಅಂತೆ ಏಕೆ ಬೆಳೆಸಲಿಲ್ಲ

ಎಂದೂ ಗಿಡ ಮರಗಳ |

ವನ್ಯಮೃಗ ಖಗಗಳ ||

ನಿತ್ಯ ಜನ ಹೆಚ್ಚುವಂತೆ

ಬುವಿಯು ಎಂದೂ ಹೆಚ್ಚಳು

ಸುಲಿಗೆ ಮಾಡ ಹೊರಟರೆ

ನಮ್ಮನೆಂದೂ ಕ್ಷಮಿಸಳು |

ನುಂಗಿ ನೀರ ಕುಡಿವಳು ||

ಗಾಳಿ ನೀರು ಬೆಳಕುಗಳಲೆ

ನಮ್ಮ ಬದುಕು ಅಡಗಿದೆ

ಅದನೆ ಮಲಿನಗೊಳಿಸೋ ನಮಗೆ

ಎಂಥ ಭೂತ ಹಿಡಿದಿದೆ |

ಸ್ವಾರ್ಥ ಮೇರೆ ಮೀರಿದೆ ||

                            -ಮಾನಸ


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಸುಗಮ ಕನ್ನಡ


ಶ್ರೀ. ಸುಗಮ ಕನ್ನಡ ಅವರಿಂದ ಮತ್ತಷ್ಟು ಲೇಖನಗಳು


pictureಬೀ.ಚಿ ಚಟಾಕೆಗಳು
pictureಗಂಡು-ಹೆಣ್ಣು
pictureಕುಡುಕರು
pictureಕೋರ್ಟ್-ಲಾಯರ್ರು
pictureಅಪ್ಪ-ಮಗ
pictureಭಿಕ್ಷುಕ ಬವಣೆ
pictureಹುಚ್ಚರ ಸಂತೆ
pictureಮೇಷ್ಟ್ರು-ಮಕ್ಳು
pictureಕಚೇರಿ ಜೋಕ್ಸ್
pictureಚರ್ಚಿಲ್

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2019