ಹುಚ್ಚರ ಸಂತೆ

ಭಿಕ್ಷುಕ: ಅಮ್ಮಾ ಏನಾದ್ರೂ ಭಿಕ್ಷೆ ಹಾಕ್ರಮ್ಮಾ
ಯಜಮಾನ:ನನ್ನ ಹೆಂಡತಿ ಮನೆಯಲ್ಲಿಲ್ಲ, ಮುಂದೆ ಹೋಗಯ್ಯಾ
ಭಿಕ್ಷುಕ:ಥೂ ನಿನ್ನ ನಿನ್ನ ಹೆಂಡತೀನ ಕೇಳಿದ್ನಾ?
****
ಮಾನಸಿಕ ಚಿಕಿತ್ಸೆ ನೀಡುವ ವೈದ್ಯರ (psychiatrist) ಸೆಕ್ರೆಟರಿ ಕೋಣೆಯೊಳಗೆ ಬಂದು ಹೇಳಿದಳು’ಡಾಕ್ಟ್ರೇ ಹೊರಗೆ ಕಾಯ್ತಾ ಇರೋ ಒಬ್ಬಾತ ತಾನು invisible ಅಂತ ಹೇಳ್ತಿದ್ದಾನೆ" ಅಂದಳು. ಅದಕ್ಕೆ ಡಾಕ್ಟರ್ ಹೊರಕ್ಕೆ ಬಂದು "ಯಾರದು? ಯಾರೂ ಕಾಣ್ತಾ ಇಲ್ಲವಲ್ಲಾ?"ಅಂದ ತಕ್ಷಣ ರೋಗಿ "ನಾನು?"ಅನ್ನಬೇಕೆ. ಆಗ ಡಾಕ್ಟರ್ ಶಾಂತವಾಗಿ "(ಹಂಗೆ) ಬಾ ಒಳಗೆ"
****
ಹುಚ್ಚಾಸ್ಪತ್ರೆಯಲ್ಲಿ ರೋಗಿಯೊಬ್ಬ ಬಾವಿಯ ಸುತ್ತಲೂ ಸುತ್ತುತ್ತಾ 27,,,,27,,,,27,,,,27,,,,ಅನ್ನುತ್ತಿದ್ದ.
ಹೊಸದಾಗಿ ಕೆಲಸಕ್ಕೆ ಸೇರಿದ್ದ ವೈದ್ಯರು ಕುತೂಹಲದಿಂದ ಹತ್ತಿರಕ್ಕೆ ಹೋಗಿ ಬಾವಿಯಲ್ಲಿ
ಏನಿದೆ ಹೀಗೆ ಎಣಿಸುತ್ತಿದ್ದಾನಲ್ಲಾ ಎಂದು ಇಣುಕಿದನು...
ಅಷ್ಟರಲ್ಲಿ ಅವನನ್ನು ಆ ರೋಗಿ ಒಳಕ್ಕೆ ದಬ್ಬಿ 28,,,28,,,28,,,ಎಂದು ಮತ್ತೆ ಸುತ್ತುತ್ತಿದ್ದನು
****
ನೆಹರು ಹುಚ್ಚಾಸ್ಪತ್ರೆಗೆ ಒಮ್ಮೆ ಭೇಟಿ ಕೊಟ್ರಂತೆ. ಬಾಗಿಲಿನಲ್ಲೇ ಒಬ್ಬಾತ ಅವರನ್ನು ನಿಲ್ಲಿಸಿ " ಯಾರು ನೀನು ? " ಅಂದ.
ಅದಕ್ಕೆ ಅವ " ನಾನು ಭಾರತದ ಪ್ರಧಾನಿ, ನೆಹರು "ಅಂದ .
ಹುಚ್ಚ ನಕ್ಕು " ನಾನೂ ಇಲ್ಲಿಗೆ ಬಂದಾಗ ಹೀಗೇ ಹೇಳ್ತಿದ್ದೆ,ಒಳಗೆ ಹೋಗು ಎಲ್ಲ ಸರಿ ಮಾಡ್ತಾರೆ,ಕರ್ಕೊಂಡು ಹೋಗ್ರಿ ಇವನನ್ನ " .
****
ಹುಚ್ಚಾಸ್ಪತ್ರೆಯಲ್ಲಿ ಕೇಳ್ಸಿದ್ದು"ನಿನ್ನ ಹೆಸರೇನು" "ಪಂಡಿತ್ ನೆಹರೂ" ಕೆಲಸ?,ಭಾರತದ ಪ್ರಧಾನಿ,ಯಾವೋನ್ ಹಂಗಂತ ಹೇಳಿದ್ದು? ದೇವರು ತಕ್ಷಣ ಪಕ್ಕದಲ್ಲಿ ಕುಳಿತಿದ್ದವ "ನಾನ್ ಹಾಗೆ ಹೇಳಿಲ್ಲಪ್ಪ!"