ಚರ್ಚಿಲ್

ಭಾಷಣ ಮಾಡುತ್ತಿದ್ದಾಗ ನಿದ್ರೆ ಮಾಡುತ್ತಿದ್ದ ಬ್ರಿಟನ್ ಪ್ರಧಾನಿಯಾಗಿದ್ದ ವಿನ್ ಸ್ಟನ್ ಚರ್ಚಿಲ್ ಅವರನ್ನು ಕಂಡು ಭಾಷಣಕಾರ "ನಾನು ಭಾಷಣ ಮಾಡುವಾಗ ಪ್ರಧಾನಿ ನಿದ್ರೆ ಮಾಡುತ್ತಿದ್ದಾರೆ, ನಾನಿದನ್ನು ಅಕ್ಷೇಪಿಸುತ್ತೇನೆ" ಎಂದು ಆರ್ಭಟಿಸಿದ. ತಕ್ಷಣ ಕಣ್ಣುಬಿಟ್ಟು ಚರ್ಚಿಲ್ "ನಿದ್ರೆ ಬಂದಿದ್ದರೆ ಎಷ್ಟೋ ಚೆನ್ನಾಗಿರುತ್ತಿತ್ತು" ಎಂದರು
ಬ್ರಿಟನ್ನಿನ ಸುಂದರ ವೇಶ್ಯೆಯೊಬ್ಬಳು, ನೋಡಲು ಕುರೂಪಿಯಾದ ಚರ್ಚಿಲ್ ಗೆ ಹೀಗೊಂದು ಪತ್ರ ಬರೆದಳು... ”ನಾನೊಬ್ಬ ಅತಿರೂಪ ಸುಂದರಿ,ನೀವೊಬ್ಬ ಅತಿ ಬುದ್ಧಿವಂತ ಪುರುಷ, ನಾವಿಬ್ಬರೂ ಮದುವೆಯಾದರೆ, ನನ್ನಂತಹ ರೂಪವುಳ್ಳ ಮತ್ತು ನಿಮ್ಮಂತಹ ಬುದ್ಧಿಯುಳ್ಳ ಮಗುಹುಟ್ಟಿದರೆ ಎಷ್ಟು ಚೆನ್ನ? ಬನ್ನಿ ವಿವಾಹವಾಗೋಣ” ಚರ್ಚಿಲ್ ಉತ್ತರಿಸಿದರು "ಆದರೆ ಅದು ಹಾಗಾಗದೆ, ನನ್ನಂತಹ ರೂಪ ನಿನ್ನಂತಹ ಬುದ್ಧಿಯುಳ್ಳ ಮಗುವಾದರೆ?"