ಕಚೇರಿ ಜೋಕ್ಸ್

"ನೀನು ಯಾಕೆ ರಜಾನೇ ತಗೋಳೊಲ್ಲ?" "ಆಫೀಸ್ ಬಿಟ್ಟಿರೋದು ಕಷ್ಟ" "ಯಾಕೆ ನೀನಿದ್ರೆ ಅಲ್ಲಿ ಕೆಲಸಾನೇ ಆಗೊಲ್ವಾ? "ಆಗುತ್ತೆ ಅನ್ನೋದು ಅವರಿಗೆ ಗೊತ್ತಾಗಬಾರ್ದು, ಅದಕ್ಕೆ"
****
"ಮ್ಯಾನೇಜರು ನಿನ್ನ ಕೆಲಸ ಏನೂಂತ ಹೇಳಿದ್ದಾರಲ್ವೆ?"ಮಾಲೀಕ ಕೇಳಿದ ಹೊಸ ನೌಕರ ಕೂಡಲೆ ಹೇಳಿದ"ಹೌದೂ ಸಾರ್ ಹೇಳಿದ್ದಾರೆ,ನೀವು ಬರೋದನ್ನ ಕಂಡ ಕೂಡ್ಲೆ ತಮ್ಮನ್ನ ಎಬ್ಬಿಸಬೇಕಂತೆ" !!
****
ಕಾರ್ಮಿಕನೊಬ್ಬ ದಿನಾ ಕೆಲಸಕ್ಕೆ ತಡವಾಗಿ ಬರುತ್ತಿದ್ದ,ನಂತರ ಕೆಲಸ ಶುರು ಮಾಡುವುದೂ ತಡ,ಕಾಫಿ,ತಿಂಡಿ,ಊಟ,ಟಯ್ಲೆಟ್ ಗೆ ಹೋಗಿ ಬರಿವುದೂ ತಡವೇ,ಇದನ್ನು ನೋಡಿ ಸಹಿಸಲಾರದೆ ಮಾಲೀಕ"ಅಲ್ಲಯ್ಯಾ ಎಲ್ಲಾನೂ ತಡವಾಗೇ ಮಾಡ್ತೀಯಲ್ಲ ನಿನ್ನ ಕೈನಲ್ಲಿ ಏನಾದ್ರೂ ಬೇಗ ಆಗುತ್ತಾ?" ......"ಆಗತ್ತೆ ಸ್ವಾಮಿ"........"ಏನು?"...."ಬೇಗ ಸುಸ್ತು ಆಗತ್ತೆ"