ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಉಗಾಭೋಗ (ಯ)

ಯದುಕೃಷ್ಣ ಯಾದವ ಕೃಷ್ಣ ಎಂದವರಿಗೆ

ಯದುಕೃಷ್ಣ ಯಾದವ ಕೃಷ್ಣ ಎಂದವರಿಗೆ ಅಂತ್ಯಕಾಲದಲಿ | ಮೊದಲಿನ ಶಬ್ಧ ಕೇಳಿದ ಮಾತ್ರದಿಂದ ಮುದದಿ ಮುಕ್ತಿಯನಿತ್ತಂತೆ | 

ಸದಾ ಭಕುತಿಯ ತನ್ನ ಪಾದದಲ್ಲಿ ಕೊಟ್ಟು |

ಎರಡನೆಯ ನಾಮ ಕೇಳಿದ್ದಕ್ಕೆ ಏನ ಕೊಡಲೆಂದು ನಾಚಿ | ನಮ್ರ ಸದಯ ಶ್ರಿ ಪುರಂದರ ವಿಠಲ ಸ್ವಾಮಿ |ಮುದದಿ ನಾಮ ಸ್ಮರಣೆಯ ಕೊಟ್ಟು ಕಾಯ್ದ

 

ಯಶೋಧೆ ಕೋಪಿಸಿಕೊಂಡು 

ಯಶೋಧೆ ಕೋಪಿಸಿಕೊಂಡು, ಎದವುತ ಮುಗ್ಗುತ, | ಕೋಲುಕೊಂಡು ಕೊಲ್ಲಹೊಡಿಯಬೇಕೆಂದು | 

ಕೋಲು ಕೊಂಡುಬಂದಳು ನಿನ್ನ ಬಳಿಗೆ, ನೀನೆಲ್ಲಿ ಪೊಕ್ಕೆಯೋ,| ಪೇಳೊ ಪುರಂದರ ವಿಠಲ

 

ಯಂ ಬ್ರಹ್ಮ ವೇದಾಹಂ ಬ್ರಹ್ಮದೇವ

"ಯಂ ಬ್ರಹ್ಮ ವೇದಾಹಂ ಬ್ರಹ್ಮದೇವ" | ಶ್ರೂತಿಶಬ್ಧಬ್ರಹ್ಮವೆಂಬ ವೇದ ಭೋದಿಸಿತಾಗಿ | 

ಇಂಥ ಮನುಜರಿಗೆಲ್ಲ ಸದ್ಭಾವವ ಪೇಳ್ವ | ಹೊಂದಿ ಬದುಕು ಹಯವದನನ ಚರಣವ |

ಹೊಂದಿ ಬದುಕೋ ಜೀವ ಹರಿಯ ನಾನೆನ್ನಬ್ಯಾಡ

 


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಸುಗಮ ಕನ್ನಡ


ಶ್ರೀ. ಸುಗಮ ಕನ್ನಡ ಅವರಿಂದ ಮತ್ತಷ್ಟು ಲೇಖನಗಳು


pictureಬೀ.ಚಿ ಚಟಾಕೆಗಳು
pictureಗಂಡು-ಹೆಣ್ಣು
pictureಕುಡುಕರು
pictureಕೋರ್ಟ್-ಲಾಯರ್ರು
pictureಅಪ್ಪ-ಮಗ
pictureಭಿಕ್ಷುಕ ಬವಣೆ
pictureಹುಚ್ಚರ ಸಂತೆ
pictureಮೇಷ್ಟ್ರು-ಮಕ್ಳು
pictureಕಚೇರಿ ಜೋಕ್ಸ್
pictureಚರ್ಚಿಲ್

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2025