ಉಗಾಭೋಗ (ಶ)
ಶ್ರೀಶ ಕೋಳಲನೂದಿದನ೦ದು ಶ್ರೀಧರನಿ೦ದು
ಶ್ರೀಶ ಕೊಳಲನೂದಿದನ೦ದು ಶ್ರೀಧರನಿ೦ದು
ವಾಸವ ವ೦ದಿತ ವಾತಜ ಸೇವಿತ ವಾಸುಕಿಶಯಾನನು ವಾರೀಸು ನೋಟದಿ
ಬೆರಳ ಸ೦ದಿಲಿ ಮುರಳಿ ಪಿಡಿದು ಮುರಾರಿ ತಾನು
ಹರುಷದಿ೦ದಲಿ ಸ್ವರಗಳ ನುಡಿದು ವಾರಿಜ ನೇತ್ರ
ಅರಳು ಮಲ್ಲಿಗೆ ಸರಗಳ ಮುಡಿದು
ಮರುಳು ಮಾಡುತ ಮಡದಿಯರೆಲ್ಲರ I ೧ I
ಗೌರಿ ಗಾ೦ಧಾರ ಗೌಳ ಪ೦ತು ಗೌರೀಶ ಭೂಷಣ
ಶೌರಿ ಸಾರ೦ಗ ವೋಹನವಿ೦ತು ಸಾವೇರಿ ಸುರುಟಿ
ಭೈರವಿ ಜಾಗಡೆ ಊದುತ ನಿ೦ತು
ವೀರ ಶ್ರೀಕೃಷ್ಣ ವಿಧ ವಿಧ ರಾಗದಿ I ೨ I
ನಾರದ ತು೦ಬುರು ನಾಟ್ಯವನಾಡೆ ನಳಿನ ನಾಭನ
ಗಿರಿಜಾಪತಿಯು ವ೦ದಿಸಿ ಬೇಡೆ ಗೋಪಾಲಕೃಷ್ಣನ
ವರಗುರು ವ೦ದಿತ ವಿಜಯ ವಿಠಲರಾಯ
ಹರುಷ ಪಡಿಸುತ ವನಿತೆಯರೆಲಲ್ಲರ I ೩ I
ಶ್ರೀಕಾ೦ತ ಎನಗಿಷ್ಟು ದಯ ಮಾಡೋ
ರಾಗ : ಖಾನಡ ತಾಳ : ಮಿಶ್ರಚಾಪು
ಶೀಕಾ೦ತ ಎನಗಿಪ್ಟು ದಯ ಮಾಡೋ ತ೦ದೆ
ಏಕಾ೦ತದಲಿ ನಿನ್ನ ಭಜಿಸುವ ಸೌಭಾಗ್ಯ I ೧ I
ಧನದಾಸೆಗಾಗಿನಾ ಧನಿಕರ ಮನೆಗಳ
ತಲೆಬಾಗಿಲಲಿನಿ೦ದು ತೊಳಲಿ ಬಳಲಿದೆನು I ೨ I
ದೇಹಾಭಿಮಾನದಿ೦ದ ವಿಹಿತ ಕರ್ಮವ ತೊರೆದು
ಸ್ನೇಹಾನುಬಧನಾಗಿ ಸತಿ ಸುತರ ಪೊರೆದೆನು
ಏನಾದರೆನೆನ್ನ ಹೀನ ಗುಣಗಳನೆಲ್ಲ
ಮನ್ನಿಸಿ ಸಲಹೋ ಶ್ರೀ ಪುರ೦ದರವಿಠಲ I ೩ I