ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಗಾರ್ಡನ್ ರೈಸ್ ಭಾತ್

ಬೇಕಾಗುವ ಸಾಮಗ್ರಿಗಳು

  • ಎಣ್ಣೆ ಒಂದು ಸೌಟು
  • ಶುಂಟಿ ಬೆಳ್ಳುಳ್ಳಿ(ಪೇಸ್ಟ್) 1 ಚಮಚ
  • ಚಿಲ್ಲಿ ಸಾಸ್/ಹ.ಮೆಣಸಿನ ಕಾಯಿ ಪೇಸ್ಟ್ 3 ಚಮಚ
  • ದೊ.ಮೆಣಸಿನಕಾಯಿ,ಈರುಳ್ಳಿ,ಎಲೆಕೋಸು,ಆಲೂಗಡ್ಡೆ,ಕ್ಯಾರೆಟ್,ಹುರಳೀಕಾಯಿ (ಪ್ರತಿಯೊಂದೂ ತೆಳ್ಳಗೆ ಉದ್ದಕ್ಕೆ ಸೀಳಿದ್ದು ಕಾಲು ಲೋಟಗಳು)
  • ಹಸಿಬಟಾಣಿ ಕಾಲು ಲೋಟ
  • ಸೋಯಾ ಮತ್ತು ಟೊಮಾಟೋ ಸಾಸ್ ಎರಡು ಚಮಚ
  • ಬಾಸುಮತಿಅನ್ನ ಒಂದು ಲೋಟ ಅಕ್ಕಿಯದು
  • ಉಪ್ಪು ನಿಂಬೆರಸ ಕೊತ್ತಂಬರಿ ರುಚಿಗೆತಕ್ಕಷ್ಟು

ಮಾಡುವ ವಿಧಾನ

  • ಬಾಣಲೆಯಲ್ಲಿ ಕಾದ ಎಣ್ಣೆಗೆ ಶುಂಟಿ ಬೆಳ್ಳುಳ್ಳಿ,ಹ.ಮೆಣಸಿನ ಕಾಯಿ ಪೇಸ್ಟ್ ಹಾಕಿ ಒಂದು ನಿಮಿಷ ಬಾಡಿಸಿ
  • ದೊ.ಮೆಣಸಿನಕಾಯಿ,ಈರುಳ್ಳಿ,ಎಲೆಕೋಸು,ಆಲೂಗಡ್ಡೆ,ಕ್ಯಾರೆಟ್,ಹುರಳೀಕಾಯಿ,ಹಸಿಬಟಾಣಿ,ಸೋಯಾ ಮತ್ತು ಟೊಮಾಟೋ ಸಾಸ್ ಹಾಕಿ ಮೂರು ನಾಲ್ಕು ನಿಮಿಷ ಬಾಡಿಸಿ
  • ಹರವಿದ ಬಾಸುಮತಿ ಅನ್ನಕ್ಕೆ ಕಲಸಿ, ತಿನ್ನಲು ಬಡಿಸಿ 

ಮತ್ತಷ್ಟು ಪಾಕವಿಧಾನಗಳು


ಪಲಾವ್ ಮತ್ತು ಭಾತ್ ಗಳು ವಿಭಾಗದ ಮತ್ತಷ್ಟು ಪಾಕವಿಧಾನಗಳು

ಮಸಾಲೆ ಮಾವಿನ ಭಾತ್
ರಾಜ್ಮಾ ರೈಸ್ ಭಾತ್
ಹಾಗಲ ಕಾಯಿ ಭಾತ್
ಖಾಂದಾ ಭಾತ್
ಟೊಮೊಟೋ ಬೆಳ್ಳುಳ್ಳಿ ಭಾತ್
 
 

© ಹಕ್ಕುಸ್ವಾಮ್ಯ 2008 - 2025