Most Viewed
ಸುಗಮಗಾನ ಸಮಾಜ
Sugama Gaana Samaja
ಘಮ ಘಮ ಸುಗಮ
Ghama Ghama Sugama
ಸುಗಮ ಹಾಸ್ಯ
Sugama Hasya
ಸುಗಮ ಚಿಣ್ಣರಲೋಕ
Kids World
ಸುಗಮ ಸಾಹಿತ್ಯ
Sugama Sahitya
ಭಕ್ತಿ-ಸುಗಮ- ಮುಕ್ತಿ
Bhakti Sugama
ಕನ್ನಡ ಪಾಠ ಶಾಲೆ
Sugama Aarogya
Useful links
- Kannada Calendar
- 2010 Hindu festival dates
- NSW Holiday List 2008-10
- NSW School Terms
- Nice things around Sydney
- A Beautiful NSW (A Guide)
- Cheapest Petrol prices in and around Sydney
ಕನ್ನಡ ಪಾಠಶಾಲೆ Kannada PaataShaale
ಭಾಷೆ
ವ್ಯಕ್ತಿಯ ಅಂತರಂಗದ ಭಾವ-ಭಾವನೆ, ಅನಿಸಿಕೆ , ಆಲೋಚನೆ ಮತ್ತು ಮನೋವರ್ತನೆ ವ್ಯವಸ್ಥಿತ ರೀತಿಯಲ್ಲಿ ಧ್ವನಿಸಂಕೇತಗಳ ಮೂಲಕ ಸಂವಹಿಸುವ ವ್ಯವಸ್ಥೆ.ಬದುಕಿನ ಸಹಜತೆ,ನಾಡಿನ ಒಗ್ಗಟ್ಟು,ಪರಂಪರೆಯ ಜೀವನ,ಸಮುದಾಯದ ಮೇಲ್ಮೆ, ಪ್ರಾಂತೀಯ ಮಹತ್ವ,ಚಾರಿತ್ರ್ಯ ಮೌಲ್ಯ , ಶಿಷ್ಟತೆ ಉಳಿಸಿ ಬೆಳೆಸಿ ಕಾಪಾಡುವುದೇ ಭಾಷೆ.ಮಗುವಿನ ಜೀವನದ ಅವಿಭಾಜ್ಯ ಅಂಗವೇ ಭಾಷೆ.
ನಮ್ಮೊಂದಿಗೆ
ಕನ್ನಡ ಕಲಿಯಲು ಮತ್ತು ಕಲಿಸಲು ಸಂಕೀರ್ಣವಾದ ಭಾಷೆ . ಈ ಭಾಷೆಯಲ್ಲಿ ಈಗ ೪೯ ಅಕ್ಷರಗಳು ಮಾತ್ರ ಬಳಕೆಯಲ್ಲಿದೆ . ಗುಣಿತಾಕ್ಷರಗಳು , ಒತ್ತಕ್ಷರಗಳು , ಸಂಯುಕ್ತಾಕ್ಷರಗಳು ಹಾಗೂ ಉತ್ತಮ ವ್ಯಾಕರಣಗಳಿಂದ ಕೂಡಿದ ಶ್ರೀಮಂತ ಭಾಷೆಯಿದು . ಈ ಭಾಷೆಯನ್ನು ಮಕ್ಕಳಿಗೆ ಕಲಿಸುವಾಗ ಅನೇಕ ಗೊಂದಲಗಳು ಉಂಟಾಗುತ್ತದೆ . ಈ ಗೊಂದಲಗಳೇ ನಮಗೆ ಸ್ಫೂರ್ತಿಯನ್ನು ನೀಡಿ ಈ ಭಾಷೆಯನ್ನು ಇನ್ನೂ ಸುಗಮ, ಸರಳ , ಸುಲಭವಾಗಿಸಬೇಕೆಂಬ ಚಿಂತನೆಯಲ್ಲಿ ತೊಡಗಿಸುವಂತೆ ಮಾಡಿದೆ . ಇದಕ್ಕಾಗಿ ಮಕ್ಕಳು ಬಹು ಬೇಗ ಕನ್ನಡ ಕಲಿಯಲು ನೆರವಾಗುವಂತೆ ವಿಧಾನಗಳು ಮೂಡಿದವು . ಅದರಿಂದಾಗಿ ಕೆಲವು ವಿದ್ಯಾರ್ಥಿಗಳು ಸಫಲರಾಗಿ ಮೊದಲ ಹಂತವನ್ನು ದಾಟಿರುವುದೇ ಸಾಕ್ಷಿ. ಕನ್ನಡ ಕಲಿಕೆಗೆ ಮಕ್ಕಳ ಆಸಕ್ತಿಯಷ್ಟೇ ಪೋಷಕರ ಪ್ರೋತ್ಸಾಹ , ಸಹಕಾರ ಅಷ್ಟೇ ಮುಖ್ಯ. ಶಾಲೆಯ ಉಪಾಧ್ಯಾಯರುಗಳು . ಕಂಪೂಟರ್ ಯುಗದಲ್ಲಿ.
ನಮ್ಮ ಕನ್ನಡವನ್ನು ಇತ್ತೀಚಿನ MS Office Software ಗಳಲ್ಲಿನ ಫಾಂಟ್ನಲ್ಲಿ ಅಳವಡಿಸಿರೋದು ಎಲ್ಲರಿಗೂ ತಿಳಿದ ವಿಷಯವೇ ಸರಿ ! ಅದ್ರೆ ನಮ್ಮ ಶಾಲೇನಲ್ಲೂ ಮಕ್ಕಳಿಗೆ ಕನ್ನಡ ಕಲಿಸಲು ಕಂಪ್ಯೂಟರ್ ಬಳಸುತ್ತಿರುವುದು ತಮಗೆಲ್ಲಾ ತಿಳಿದಿರಲಿ .
ಆಶ್ಚರ್ಯ !
ಕನ್ನಡ ಲಿಪಿ ಒಂದೂವರೆ ಎರಡು ಸಾವಿರ ವರ್ಷಕ್ಕೂ ಹಳೆಯದು ಅಲ್ಲವೇ? ಪ್ರಪಂಚದೆಲ್ಲೆಡೆ ಗುರುತಿಸಿದರೆ ಸುಮಾರು ೫೦ಮಿಲಿಯನ್ನಿಗೂ ಮೀರಿ ಕನ್ನಡ ಬಲ್ಲವರಿದ್ದಾರೆ . ಕ್ರಿ.ಪೂ.೩ನೇ ಶತಮಾನದ ಮೌರ್ಯರು, ಕ್ರಿ . ಶ.೨ರ ಶಾತವಾಹನರು ನಂತರದ ಪಲ್ಲವರು, ಕದಂಬರು, ಗಂಗರು,ಚಾಲುಕ್ಯರು, ರಾಷ್ಟ್ರಕೂಟರು, ಹೊಯ್ಸಳರು, ವಿಜಯನಗರದರಸರು, ಬಹಮನಿ ಸುಲ್ತಾನರು, ಮೈಸೂರಿನ ಒಡೆಯರು ಹಾಗೂ ಇನ್ನೂ ಅನೇಕರು ಆಳಿದ-ಆಡಿದ ಕನ್ನಡ ನಮ್ಮದು . ಕಲೆ, ವಾಸ್ತುಶಿಲ್ಪ, ಸಂಗೀತ , ಸಾಹಿತ್ಯ ಕನ್ನಡಿಗರ ಉಸಿರು . ಗಂಧ , ಚಿನ್ನ ಮತ್ತು ಮಲೆನಾಡಿನ ಹಸಿರಿಗೆ ಹೆಸರು . . . ಹೀಗಿರುವಾಗ ಕನ್ನಡಿಗರೇ ಕನ್ನಡ ಕಲಿಯಲು ಹಿಂಜರಿಯುತ್ತಿರುವುದು, ಏನಾದರೊಂದು ನೆಪ ಹೇಳಿ ಆಸಕ್ತಿ ಕಳೆದುಕೊಳ್ಳುತ್ತಿರುವುದು ಆಶ್ಚರ್ಯವೂ ಅಲ್ಲದೆ ಸೋಜಿಗವೂ ಅಲ್ಲವೆ ?
ನೀವು ಪ್ರಪಂಚದ ಯಾವುದೇ ಭಾಗದಲ್ಲಿದ್ದು, ನಿಮಗೆ ಉಚಿತ ಕನ್ನಡ ಕಲಿಸುವ ಕಲಿಯುವ ಆಸಕ್ತಿ ಇದ್ದಲ್ಲಿ ನಮ್ಮನ್ನು ಸಂಪರ್ಕಿಸಿ ಸಿಡ್ನಿಯಲ್ಲಿ ನಮ್ಮ ಕನ್ನಡ ಶಾಲೆಗಳ ವಿವರ
೧.ಲಿವರ್ಪೂಲ್ ನಲ್ಲಿ ಕನ್ನಡ ಪಾಠಶಾಲೆ ವಿವರ:
ನಡೆಯುವ ಸ್ಥಳ: WattleGrove Public School, Cressbrook Drive, Wattlegrove NSW-2173
ಪ್ರತಿ ಶನಿವಾರ ಮಧ್ಯಾಹ್ನ 4 ರಿಂದ 6 ಘಂಟೆಯ ವರೆಗೆ.
contact Mr.Kanakapur Narayana- sugamakannada@yahoo.com.au