ಸಂಪರ್ಕಿಸಿ
ಕಾರ್ಯಕ್ರಮಗಳು
ಮುಖಪುಟ
ತರಕಾರಿ ಟೊಸ್ಟ್
ಬೇಕಾಗುವ ಸಾಮಗ್ರಿಗಳು
ಬ್ರೆಡ್ ಒಂದು ಪೌಂಡ್,
ಹೆಚ್ಚಿದ ಈರುಳ್ಳಿ 150 ಗ್ರಾಂ
ಸಣ್ಣಗೆ ಹೆಚ್ಚಿದ ತರಕಾರಿ (ಹುರಳಿಕಾಯಿ,ದೊ.ಮೆಣಸಿನಕಾಯಿ,ಕ್ಯಾರೆಟ್,ಬದನೆಕಾಯಿ, ಅಣಬೆ) 100 ಗ್ರಾಂ
ಹೆಚ್ಚಿದ ಹಸಿ ಮೆಣಸಿನ ಕಾಯಿ ಎರಡು
ಅರಿಸಿನಪುಡಿ ಕಾಲು ಚಮಚ
ಗರಂಮಸಾಲೆ ಪುಡಿ ಕಾಲು ಚಮಚ
ಎಣ್ಣೆ ಮೂರು ಚಮಚ
ಹೆಚ್ಚಿದ ಕೊತ್ತಂಬರಿ ಸೊಪ್ಪು ಎರಡು ಚಮಚ
ಬೆಣ್ಣೆ 50 ಗ್ರಾಂ
ಉಪ್ಪು ಅರ್ಧ ಚಮಚ
ಮಾಡುವ ವಿಧಾನ
ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಈರುಳ್ಳಿ, ಹಸಿಮೆಣಸಿನಕಾಯಿ ಸೇರಿಸಿ ಈರುಳ್ಳಿ ಮೆತ್ತಗಾಗುವ ವರೆಗೂ ಬೇಯಿಸಿ
ಸಣ್ಣಗೆ ಹೆಚ್ಚಿದ ತರಕಾರಿಯನ್ನೂ ಸೇರಿಸಿ ಎರಡು ನಿಮಿಷ ಬೇಯಿಸಿ
ಅರಿಶಿನ ಗರಂ ಮಸಾಲಾ,ಉಪ್ಪು,ಕೊತ್ತಂಬರಿ ಸೇರಿಸಿದ ತಕ್ಷಣ ಒಲೆಯಿಂದಿಳಿಸಿ
ಬೆಣ್ಣೆ ಅಥವಾ ಚೀಸ್ ಸವರಿದ ಬ್ರೆಡ್ ಮೇಲೆ ಮಿಶ್ರಣ ಹರಡಿ
ಓವನ್ ನಲ್ಲಿ 10 ನಿಮಿಷ 160 ಡಿಗ್ರಿ ಶಾಖದಲ್ಲಿ ಬೇಯಿಸಿ
ಮತ್ತಷ್ಟು ಪಾಕವಿಧಾನಗಳು
ಬಗೆ ಬಗೆಯ ಗಾರಿಗೆ ವಿಭಾಗದ ಮತ್ತಷ್ಟು ಪಾಕವಿಧಾನಗಳು
ಕಡಲೇ ಕಾಯಿ ಟೋಸ್ಟ್
ಈರುಳ್ಳಿ ಟೋಸ್ಟ್
ಶುಂಠಿ ಬಿಸ್ಕತ್ತು
ಕೊಬ್ಬರಿ ಕುಕ್ಕೀಸ್
ಬಾಳೆ ಬಿಸ್ಕತ್ತು