ಸಂಪರ್ಕಿಸಿ
ಕಾರ್ಯಕ್ರಮಗಳು
ಮುಖಪುಟ
ಹೆಸರು ಬೇಳೆ ಪಕೋಡ (ಉಡುಪಿ ಶೈಲಿ)
ಬೇಕಾಗುವ ಸಾಮಗ್ರಿಗಳು
ಹೆಸರುಬೇಳೆ ಒಂದು ಲೋಟ
ಅರ್ಧ ಲೀಟರ್ ಎಣ್ಣೆ ಕೆಂಪಗೆ ಕರಿಯಲು
ಮೊಸರು ಒಂದು ಲೋಟ
ಉಪ್ಪು ಮೆಣಸಿನಪುಡಿ ಒಂದೊಂದು ಚಮಚ
ಮಾಡುವ ವಿಧಾನ
ಬೇಳೆಯನ್ನು ಎರದು ಘಂಟೆ ಕಾಲ ನೀರಿನಲ್ಲಿ ನೆನೆಸಿ.
ನೀರು ಬಸಿದು ನುಣ್ಣಗೆ ರುಬ್ಬಿ ಉಪ್ಪುಸೇರಿಸಿ.
ಬಾಣಲೆಯಲ್ಲಿ ಎಣ್ಣೆಹಾಕಿ ಬಿಸಿಮಾಡಿ.(ಸಾಧಾರಣ ಅಥವಾ ಸಣ್ಣ ಉರಿ)
ಒದ್ದೆಯಾದ ಕೈಗಳಿಂದ ಗೋಲಿ ಗಾತ್ರ ಉಂಡೆ ಮಾಡಿ ಎಣ್ಣೆಯಲ್ಲಿ ಕರೆಯಿರಿ.
ಕೆಂಪಗೆ ಕರೆದ ಉಂಡೆಗಳನ್ನು ತಟ್ಟೆಯಲ್ಲಿ ಜೋಡಿಸಿ
ಅದರ ಮೇಲೆ ಮೊಸರು ಸುರಿದು, ಮಸಾಲೆ ಪುಡಿ ಮತ್ತು ಹೆಚ್ಚಿದ ಕೊತ್ತಂಬರಿ ಸಿಂಪಡಿಸಿ ಬಡಿಸಿ.
ಎರಡು ತೊಟ್ಟು ಟಮೋಟೋ ಸಾಸ್ ಅವುಗಳ ಮೇಲೆ ಹಾಕಿದಲ್ಲಿ ರೆಸ್ಟೋರೆಂಟ್ ಶೈಲಿಯಲ್ಲಿ ತೋರುವಂತಿಡಬಹುದು
(ಮಸಾಲೆಪುಡಿ-ಒಣಶುಂಟಿಪುಡಿ,ಕಾಳುಮೆಣಸಿನಪುಡಿ,ಹುರಿದ ಜೀರಿಗೆ ಪುಡಿ,ಪುಡಿ ಉಪ್ಪು ಎಲ್ಲಾ ಒಂದೊಂದು ಚಮಚ)
ಮತ್ತಷ್ಟು ಪಾಕವಿಧಾನಗಳು
ಕರೆದ ತಿಂಡಿಗಳು ವಿಭಾಗದ ಮತ್ತಷ್ಟು ಪಾಕವಿಧಾನಗಳು
ತರಕಾರಿ ಗಟ್ಟಿ ಬಜೆ
ಬಾಳೇ ಸಣ್ಣಪ್ಪ
ಅತಿರಸ
ತೆಂಗಿನ ಕಾಯಿ ಬೋಂಡಾ
ಬೇಳೆ ಬೋಂಡಾ