ಸಂಪರ್ಕಿಸಿ
ಕಾರ್ಯಕ್ರಮಗಳು
ಮುಖಪುಟ
ಮೂಲಂಗಿ ವಡೆ (ಉಡುಪಿ ಶೈಲಿ)
ಮಾಡುವ ವಿಧಾನ
ಮೂಲಂಗಿ ಅರ್ಧ ಕಿಲೋ
ಉಪ್ಪು ಒಂದೂವರೆ ಚಮಚ
ಅಕ್ಕಿಹಿಟ್ಟು ಅರ್ಧಲೋಟ
ಅರ್ಧ ಲೀಟರ್ ಎಣ್ಣೆ ಕೆಂಪಗೆ ಕರಿಯಲು
ಹಸಿಮೆಣಸಿನಕಾಯಿ ಹತ್ತು
ಹೆಚ್ಚಿದ ಕೊತ್ತಂಬರಿ ಒಂದು ಕಂತೆ
ಮಾಡುವ ವಿಧಾನ
ಹಸಿಮೆಣಸಿನಕಾಯಿ , ಕೊತ್ತಂಬರಿ ಉಪ್ಪು ಸೇರಿಸಿ ಒರಟಾಗಿ ರುಬ್ಬಿಕೊಳ್ಳಿ
ಮೂಲಂಗಿ ಮೇಲಿನ ಸಿಪ್ಪೆ ತೆಗೆದು ಅತಿ ಸಣ್ಣ ಹೋಳು ಅಥವಾ ದಪ್ಪಗೆ ತುರಿಯಿರಿ
ರುಬ್ಬಿದ ಪದಾರ್ಥ ಮೂಲಂಗಿಗೆ ಅಕ್ಕಿಹಿಟ್ಟು ಸೇರಿಸಿ ಗಟ್ಟಿ ಮುದ್ದೆಯಾಗಿ ಮಾಡಿಕೊಳ್ಳಿ
ತಕ್ಷಣ ಪುಟ್ಟ ಬಿಲ್ಲೆಗಳಾಗಿ ತಟ್ಟಿಕೊಂಡು ಅಥವಾ ಮಣೆಯ ಮೇಲೆ ತಟ್ಟಿಕೊಂಡು ಡಬ್ಬಿ ಮುಚ್ಚಳದಿಂದ ಒತ್ತಿ ಒಂದೇ ಸಮನಾದ ವಡೆಗಳನ್ನು ಮಾಡಿ
ಕೆಂಪಗೆ ಕರೆದು ಕೂಡಲೇ ಖಾರ ಚಟ್ನಿ ಅಥವಾ ಸಾಸ್ ಜೊತೆ ಮೆಲ್ಲಲು ಕೊಡಿ
(ಹಿಟ್ಟು ಕಲಸಿದ ಅರ್ಧಗಂಟೆಯೊಳಗೇ ಮಾಡದಿದ್ದಲ್ಲಿ ಅದು ನೀರು ಬಿಟ್ಟುಕೊಳ್ಳುವ ಸಂಭವ ಉಂಟು)
ಮತ್ತಷ್ಟು ಪಾಕವಿಧಾನಗಳು
ಕರೆದ ತಿಂಡಿಗಳು ವಿಭಾಗದ ಮತ್ತಷ್ಟು ಪಾಕವಿಧಾನಗಳು
ತರಕಾರಿ ಗಟ್ಟಿ ಬಜೆ
ಬಾಳೇ ಸಣ್ಣಪ್ಪ
ಅತಿರಸ
ತೆಂಗಿನ ಕಾಯಿ ಬೋಂಡಾ
ಬೇಳೆ ಬೋಂಡಾ