ಸಂಪರ್ಕಿಸಿ
ಕಾರ್ಯಕ್ರಮಗಳು
ಮುಖಪುಟ
ಬದನೆ ಟಿಕ್ಕಾ
ಬೇಕಾಗುವ ಸಾಮಗ್ರಿಗಳು
ನಾಲ್ಕು ಬದನೆ
ಕ್ಯಾರೆಟ್ ಒಂದು
ಬೇಯಿಸಿದ ಆಲೂಗಡ್ಡೆ 2
ಬಿಡಿಸಿದ ಬಟಾಣಿ
ಹುರಳಿ ಕಾಯಿ 50ಗ್ರಾಂ
ಹೆಚ್ಚಿದ 2 ಈರೂಳ್ಳಿ
1 ಟೊಮಾಟೋ
ಗೋಲಿ ಗಾತ್ರದ ಜಜ್ಜಿದ ಶುಂಠಿ
ಬೆಳ್ಳುಳ್ಳಿ ಮೂರು ದಳ ಜಜ್ಜಿದ್ದು
ಗರಂ ಮಸಾಲ 1 ಟೀ ಚಮಚ
ಹೆಚ್ಚಿದ ಹಸಿ ಮೆ.ಕಾಯಿ 2-3
ಕೊತ್ತಂಬರಿ ಒಂದು ಹಿಡಿ ಹೆಚ್ಚಿದ್ದು
ಪುದೀನಾ ಹೆಚ್ಚಿದ್ದು ಅರ್ಧ ಕಂತೆ
ಜೀರಿಗೆ ಅರ್ಧ ಚಮಚ
ಉಪ್ಪು ಒಂದೂವರೆ ಚಮಚ
ಧನಿಯಾ ಮತ್ತು ಕೆಂಪು ಮೆನಸಿನ ಪುಡಿ ಎರಡೆರಡು ಚಮಚ
ಎಣ್ಣೆ ಅರ್ಧ ಸೌಟು
2 ಚಮಚ ನಿಂಬೆ ರಸ
ಮಾಡುವ ವಿಧಾನ
ಬದನೆಯನ್ನು ಅರ್ಧ ಸೀಳಿ ಉರಿಯಲ್ಲಿ ಅರ್ಧ ಬೇಯಿಸಿ,ತಿರುಳನ್ನು ತೆಗೆದು ಸಿಪ್ಪೆ ಬೆರೆಡೆ ಇಡಿ
ಕ್ಯಾರೆಟ್ ಸಣ್ಣ ತುಂಡು ಮಾಡಿ,ಆಲೂಗಡ್ಡೆ ಸಿಪ್ಪೆ ತೆಗೆದು ನಾದಿಕೊಳ್ಳಿ
ಕೊತ್ತಂಬರಿ ಪುದಿನಾ ಅರೆದು ಸ್ವಲ್ಪ ಉಪ್ಪು ಬೆರೆಸಿ
ಬಾಣಲೆ ಕಾದ ನಂತರ ಎಣ್ಣೆಗೆ ಜೀರಿಗೆ ಹಾಕಿ
ಜೀರಿಗೆ ಸಿಡಿಯುವಾಗ ಈರೂಳ್ಳಿ,ಶುಂಠಿ,ಬೆಳ್ಳುಳ್ಳಿ,ಹ.ಮೆ.ಕಾಯಿ ಸೇರಿಸಿ ಕೆಂಪಗೆ ಹುರಿಯಿರಿ
ಅರಿಶಿನ,ಧನಿಯಾ ಪುದಿ,ಗರಂ.ಮ.ಪುಡಿ ಉಪ್ಪು ಸೇರಿಸಿ ಹುರಿಯಿರಿ
ಆಲೂಗಡ್ಡೆ,ಹುರಳಿಕಾಯಿ,ಕ್ಯಾರೆಟ್,ಬದನೆ ಸಿಪ್ಪೆ ಸೇರಿಸಿ ಚೆನ್ನಾಗಿ ಹುರಿಯಿರಿ
ನಿಂಬೆರಸ ಸೇರಿಸಿ ಉರಿ ಆರಿಸಿ ಕೆಳಗಿಳಿಸಿ
ಪ್ರತಿ ಬದನೆಯಲ್ಲಿ ಮಸಾಲೆ ಸೇರಿಸಿ ಉರಿಯಲ್ಲಿ ಗ್ರಿಲ್ ಮಾಡಿ
ಮತ್ತಷ್ಟು ಪಾಕವಿಧಾನಗಳು
ಉತ್ತರ ಭಾರತದ ತಿನಿಸುಗಳು ವಿಭಾಗದ ಮತ್ತಷ್ಟು ಪಾಕವಿಧಾನಗಳು
ರವೆ ಹುಗ್ಗಿ (ಪೊಂಗಲ್)
ಮ್ಯಾಂಗೋ ಕರಿ
ಟೊಮಾಟೋ ಸಬ್ಜಿ
ಪಾಲಕ್ ಸಬ್ಜಿ
ರಸದಾರ್ ಆಲೂ