ಸಂಪರ್ಕಿಸಿ
ಕಾರ್ಯಕ್ರಮಗಳು
ಮುಖಪುಟ
ಈರೂಳ್ಳಿ ವಡೆ
ಬೇಕಾಗುವ ಸಾಮಗ್ರಿಗಳು
ಕಡಲೆ ಬೇಳೆ ಒಂದು ಲೋಟ
ತೊಗರಿ ಬೇಳೆ ಕಾಲು ಲೋಟ
ಈರೂಳ್ಳಿ ಎರಡು (ಸಣ್ಣಗೆ ಹೆಚ್ಚಿದ್ದು)
ಕೊತ್ತಂಬರಿ ಸೊಪ್ಪು ಕರಿಬೇವು ಸೊಪ್ಪು
3-4 ಹಸಿಮೆಣಸಿನ ಕಾಯಿ(ಸಣ್ಣಗೆ ಹೆಚ್ಚಿದ್ದು)
ಚಿಟಿಕೆ ಇಂಗು
ಉಪ್ಪು ರುಚಿಗೆ
ಕರಿಯಲು ಎಣ್ಣೆ
ಮಾಡುವ ವಿಧಾನ
ಎರಡೂ ಬೇಳೆಗಳನ್ನೂ ಮೂರು ಘಂಟೆ ನೆನೆಸಿಡಿ
ನೀರನ್ನು ಬಸಿದು,ಸಾಕಷ್ಟು ಉಪ್ಪು ಸೇರಿಸಿ ಗಟ್ಟಿಯಾಗಿ ರುಬ್ಬಿಕೊಳ್ಳಿ
ಹೆಚ್ಚಿದ ಈರೂಳ್ಳಿ,ಕೊತ್ತಂಬರಿ ಕರಿಬೇವು ಮತ್ತು ಹಸಿಮೆಣಸಿನ ಕಾಯಿ,ಇಂಗು ಬೆರೆಸಿ, ನಿಂಬೆ ಗಾತ್ರದ ಸಣ್ಣ ಉಂಡೆಗಳಾಗಿ ಮಾಡಿ
ಉಂಡೆಗಳನ್ನು ಚಪ್ಪಟೆಯಾಗಿ ಮಾಡಿ ಕೆಂಪಗಾಗುವ ವರೆಗೆ ಬಿಸಿ ಎಣ್ಣೆಯಲ್ಲಿ ಕರಿದು ತಿನ್ನಲು ಕೊಡಿ ನೀವೂ ತಿನ್ನಿ
ಮತ್ತಷ್ಟು ಪಾಕವಿಧಾನಗಳು
ಕರೆದ ತಿಂಡಿಗಳು ವಿಭಾಗದ ಮತ್ತಷ್ಟು ಪಾಕವಿಧಾನಗಳು
ತರಕಾರಿ ಗಟ್ಟಿ ಬಜೆ
ಬಾಳೇ ಸಣ್ಣಪ್ಪ
ಅತಿರಸ
ತೆಂಗಿನ ಕಾಯಿ ಬೋಂಡಾ
ಬೇಳೆ ಬೋಂಡಾ