ಸಂಪರ್ಕಿಸಿ
ಕಾರ್ಯಕ್ರಮಗಳು
ಮುಖಪುಟ
ಬದನೆ ಕಾಯಿ ಎಣ್ಣೆಗಾಯಿ
ಬೇಕಾಗುವ ಸಾಮಗ್ರಿಗಳು
ಅರ್ಧ ಕಿಲೋ ಗುಂಡು ಬದನೇ ಕಾಯಿ
ಎಣ್ಣೆ ಒಂದು ಬಟ್ಟಲು
ಒಂದು ನಿಂಬೆ ಹಣ್ಣು
ಹತ್ತು ಒಣ ಮೆಣಸಿನ ಕಾಯಿ
ಕಡ್ಲೇ ಬೇಳೆ ಮತ್ತು ಉದ್ದಿನ ಬೇಳೆ ಎರೆಡೆರೆಡು ಚಮಚ
ಓಣ ಕೊಬ್ಬರಿ ತುರಿ ಎರಡು ಚಮಚ
ಒಂದು ಚಮಚ ಕೊತ್ತಂಬರಿ ಬೀಜ
ಚಕ್ಕೆ,ಮೊಗ್ಗು
ಲವಂಗ ಸ್ವಲ್ಪ
ಒಂದು ಚಮಚ ಆರಿಶಿನ್ ಮತ್ತು ಸಾಸಿವೆ
ಮಾಡುವ ವಿಧಾನ
ಒಣ ಮೆಣಸಿನ ಕಾಯಿ,ಕಡ್ಲೇ ಬೇಳೆ ಮತ್ತು ಉದ್ದಿನ ಬೇಳೆ ,ಓಣ ಕೊಬ್ಬರಿ , ಕೊತ್ತಂಬರಿ ಬೀಜ,ಚಕ್ಕೆ,ಮೊಗ್ಗು,ಲವಂಗ ಎಲ್ಲವನ್ನೂ ಪ್ರತ್ಯೇಕ ಹುರಿದು ಪುಡಿ ಮಾಡಿಕೊಳ್ಳಿ
ಪುಡಿಗೆ ಉಪ್ಪು, ಅರಿಸಿನ ಸೇರಿಸಿ ಕಲಸಿ
ಪ್ರತಿಯೊಂದು ಬದನೆ ಕಾಯಿಯನ್ನೂ ತುಂಡಾಗದಂತೆ ನಾಲ್ಕು ಭಾಗ ಸೀಳಿ
ನಡುವೆ ಒಂದೊಂದು ಚಮಚ ಮಸಾಲೆಯನ್ನು ತುಂಬಿಡಿ
ಕಾದ ಎಣ್ಣೆಗೆ ಸಾಸಿವೆ,ಕರಿಬೇವು ಹಾಕಿ ಕಾಯಿಗಳನ್ನು ಅದರಲ್ಲಿ ಸುರಿದು ಎಣ್ಣೆಯಲ್ಲೇ ಬೇಯಿಸಿ
ಹತ್ತು ನಿಮಿಷಗಳ ನಂತರ (ಮೃದುವಾಗಿ ಬೆಂದ ನಂತರ) ಎಣ್ಣೆಗಾಯಿ ಕೆಳಗಿಳಿಸಿ
ಮತ್ತಷ್ಟು ಪಾಕವಿಧಾನಗಳು
ಕರೆದ ತಿಂಡಿಗಳು ವಿಭಾಗದ ಮತ್ತಷ್ಟು ಪಾಕವಿಧಾನಗಳು
ತರಕಾರಿ ಗಟ್ಟಿ ಬಜೆ
ಬಾಳೇ ಸಣ್ಣಪ್ಪ
ಅತಿರಸ
ತೆಂಗಿನ ಕಾಯಿ ಬೋಂಡಾ
ಬೇಳೆ ಬೋಂಡಾ