ಸಂಪರ್ಕಿಸಿ
ಕಾರ್ಯಕ್ರಮಗಳು
ಮುಖಪುಟ
ಹೂರಣದ ಹೋಳಿಗೆ
ಬೇಕಾಗುವ ಸಾಮಗ್ರಿಗಳು
ಅರ್ಧಕಿಲೋ ಮೈದಾಹಿಟ್ಟು
ಅರ್ಧಕಿಲೋ ಕಡಲೇ ಬೇಳೆ
ಅರ್ಧಕಿಲೋ ಬೆಲ್ಲ
ಹತ್ತು ಯಾಲಕ್ಕಿ
ಕಾಲು ಕಿಲೋ ಎಣ್ಣೆ/ತುಪ್ಪ
ಮಾಡುವ ವಿಧಾನ
ಜರಡಿ ಹಿಡಿದ ಮೈದಾಹಿಟ್ಟಾನ್ನು ಪೂರಿ ಹಿಟ್ಟಿನ ಹದಕ್ಕೆ ಕಲಸಿ,ಚೆನ್ನಾಗಿ ನಾದಿ ಎಣ್ಣೆಯಲ್ಲಿ ಅದ್ದಿಡಿ(ಎರಡರಿಂದ ನಾಲ್ಕು ತಾಸು)
ಕಡಲೆ ಬೇಳೆ ಎರಡುಘಂಟೆ ನೆನೆಸಿ,ನಂತರ ನೀರಿನಲ್ಲಿ ಕುದಿಸಿ ನೀರನ್ನು ಬಸಿದುಕೊಳ್ಳಿ
ಬೆಲ್ಲದ ಪುಡಿ ಬೆರೆಸಿ ಬಾಣಲೆಯಲ್ಲಿ ಬಾಡಿಸಿ,ಬೆಲ್ಲ ಕರಗಿದ ನಂತರ ಆರಿಸಿ,ರುಬ್ಬಿಟ್ಟುಕೊಂಡರೆ ಹೂರಣ ಸಿದ್ಧ
ಮುಂಚೆ ಕಲಸಿದ್ದ ಮೈದಾ ಹಿಟ್ಟನ್ನು ನಿಂಬೆ ಗಾತ್ರದಲ್ಲಿ ತೆಗೆದು ಬಟ್ಟಲಿನಂತೆ ಹಳ್ಳಮಾಡಿ ಹೂರಣ ತುಂಬಿ ಅದೇ ಹಿಟ್ಟಿನಿಂದ ಮುಚ್ಚಿ ಲಟ್ಟಿಸಿ
ಕಾದ ಕಾವಲಿಯ ಮೇಲೆ ತುಪ್ಪ ಬಳಸಿ ಸುಡುವುದು.
ಬಿಸಿಬಿಸಿ ಇದ್ದಾಗಲೇ ಹಾಲು ತುಪ್ಪದೊಡನೆ ತಿನ್ನಲು ಕೊಡಿ
ಮತ್ತಷ್ಟು ಪಾಕವಿಧಾನಗಳು
ಸಿಹಿತಿಂಡಿಗಳು ವಿಭಾಗದ ಮತ್ತಷ್ಟು ಪಾಕವಿಧಾನಗಳು
ಬೂದಕುಂಬಳಕಾಯಿ ಹಲ್ವ(ಮೊರಬ್ಬ)
ಗೋಡಂಬಿ ಟಾಫಿ
ರವೆ ಬರ್ಫಿ
ಪಂಚಕಜ್ಜಾಯ
ಶ್ರೀಖಂಡ