ಸಂಪರ್ಕಿಸಿ
ಕಾರ್ಯಕ್ರಮಗಳು
ಮುಖಪುಟ
ಕಡಲೇ ಬೇಳೆ ಚಟ್ನಿ
ಬೇಕಾಗುವ ಸಾಮಗ್ರಿಗಳು
ಅರ್ಧ ಕಿಲೋ ಕಡಲೇ ಬೇಳೆ
ಅರ್ಧ ತೆಂಗಿನ ಕಾಯಿ ತುರಿದದ್ದು
ಹಸಿ ಮೆಣಸಿನಕಾಯಿ ಹತ್ತು
ಉಪ್ಪು ಒಂದು ಟೀ ಚಮಚ
ಹುಣಸೇ ಹಣ್ಣು ನಿಂಬೆ ಗಾತ್ರ
ಕೊತ್ತಂಬರಿ ಸೊಪ್ಪು ಒಂದು ಕಟ್ಟು
ವಗ್ಗರಣೆಗೆ ಸ್ವಲ್ಪ ಎಣ್ಣೆ ಕರಿಬೇವು,ಸಾಸಿವೆ,ಇಂಗು,ಉದ್ದಿನಬೇಳೆ
ಮಾಡುವ ವಿಧಾನ
ಹುಣಸೇ ಹಣ್ಣನ್ನು ಹತ್ತು ನಿಮಿಷ ನೀರಿನಲ್ಲಿ ನೆನೆಸಿಡಿ
ಕಡಲೇ ಬೇಳೆ ಬಾಣಲೆಯಲ್ಲಿ ಕೆಂಪಗೆ ಆಗುವ ಹಾಗೆ ಹುರಿಯಿರಿ.
ಹುರಿದ ಬೇಳೆಯನ್ನು ಪೂರ್ತಿ ಆರಲು ಬಿಡಿ.
ಬೇಳೆ ಮತ್ತು ಹುಣಸೇ ಹಣ್ಣನ್ನು ಮಿಕ್ಕಎಲ್ಲಾ ಸಾಮಾನಿನ ಜೊತೆ ಸೇರಿಸಿ ಅರ್ಧಲೋಟ ನೀರು ಬೆರೆಸಿ ರುಬ್ಬಿಕೊಳ್ಳಿ
ರುಬ್ಬಿದ ಮಿಶ್ರಣಕ್ಕೆ ವಗ್ಗರಣೆ ಹಾಕಿ ( ಕಾಯಿಯ ಬದಲಿಗೆ ಒಣ ಕೊಬ್ಬರಿ ಉಪಯೋಗಿಸಿದಲ್ಲಿ ಚಟ್ನಿ ಎರಡು ದಿನ ಕೆಡುವುದಿಲ್ಲ)
ಮತ್ತಷ್ಟು ಪಾಕವಿಧಾನಗಳು
ಬಗೆ ಬಗೆಯ ಚಟ್ನಿಗಳು ವಿಭಾಗದ ಮತ್ತಷ್ಟು ಪಾಕವಿಧಾನಗಳು
ಮಾವಿನ ಕಾಯಿ ಚಟ್ನಿ(ಮಂಗಳೂರು ಶೈಲಿ)
ಒಂದೆಲಗ(ಬ್ರಾಹ್ಮೀ)ಚಟ್ನಿ(ಮಂಗಳೂರು ಶೈಲಿ)
ಎಳ್ಳು ಚಟ್ನಿ/ಎಡ್ಮೆ ಚಟ್ನಿ(ಮಂಗಳೂರು ಶೈಲಿ)
ಟೊಮೆಟೊ ಚಟ್ನಿ
ಕಡಲೇಕಾಯಿ ಚಟ್ನಿ