ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಪಂಚಕಜ್ಜಾಯ

ಬೇಕಾಗುವ ಸಾಮಗ್ರಿಗಳು

  • ಹುರಿದು ಬೀಸಿದ ಹೆಸರುಬೇಳೆ ಪುಡಿ ಅರ್ಧ ಕೇಜಿ
  • ಬೆಲ್ಲ ಅರ್ಧ ಕೇಜಿ
  • ಎರಡು ತೆಂಗಿನ ಕಾಯಿ
  • ಹುರಿದ ಎಳ್ಳು ನಾಕು ಚಮಚ
  • ಐವತ್ತು ಗ್ರಾಂ ಗೋಡಂಬಿ
  • ತುಪ್ಪ ನೂರು ಗ್ರಾಂ
  • ಜೇನುತುಪ್ಪ ನೂರು ಗ್ರಾಂ

ಮಾಡುವ ವಿಧಾನ

  • ತೆಂಗಿನ ಕಾಯಿಯನ್ನು ತುರಿದು ಬಾಣಲೆಯಲ್ಲಿ ಹುರಿದುಕೊಳ್ಳುವುದು.
  • ಹುರಿದ ಕಾಯಿ ತುರಿಗೆ ಬೆಲ್ಲ,ಹೆಸರು ಬೇಳೆ ಪುಡಿ ಸೇರಿಸಿ ಒರಳಿನಲ್ಲಿ ಕುಟ್ಟಿಕೊಳ್ಳುವುದು.
  • ಕುಟ್ಟಿದ ಮಿಶ್ರಣಕ್ಕೆ ಎಳ್ಳು, ತುಪ್ಪ, ಜೇನುತುಪ್ಪ ಕಲಸುವುದು.
  • ಇದನ್ನು ಉದುರುದುರಾಗಿಯೂ ಅಥವಾ ಉಂಡೆಯಾಗಿಯೂ ಮಾಡಿ ತಿನ್ನಬಹುದು,( ಆಡುವ ಮಕ್ಕಳಿಗಿದು ಶಕ್ತಿದಾಯಕ.)

 

ಮತ್ತಷ್ಟು ಪಾಕವಿಧಾನಗಳು


ಸಿಹಿತಿಂಡಿಗಳು ವಿಭಾಗದ ಮತ್ತಷ್ಟು ಪಾಕವಿಧಾನಗಳು

ಮೈಸೂರು ಪಾಕ್
ಬಾಳೆಹಣ್ಣಿನ ಹಲ್ವ
ಬೇಸನ್ ಲಾಡು
ಬಂನ್ಸ್(ಮಂಗಳೂರು ಶೈಲಿ)
ಹೂರಣದ ಹೋಳಿಗೆ
 
 

© ಹಕ್ಕುಸ್ವಾಮ್ಯ 2008 - 2025