ರಾಹುಕಾಲ

ಒಳ್ಳೆಯ ಕೆಲಸ ಶುರು ಮಾಡಲು ರಾಹುಕಾಲವಲ್ಲದ ಘಳಿಗೆ ಒಳ್ಳೆಯದೆಂದು ಬಹುಜನರ ನಂಬಿಕೆ.ಅಂತಹವರ ಸದುಪಯೋಗಕ್ಕಾಗಿ ಈ ಮಾಹಿತಿ.ರಾಹುಕಾಲವು ವಾರದ ಏಳೂ ದಿನಗಳಲ್ಲೂ ಬೇರೆ ಬೇರೆ ಅವಧಿಗಳಲ್ಲಿದೆ.

ಈ ಅವಧಿಯನ್ನು( ಬೆಳಿಗ್ಗೆ 7.30 ರಿಂದ ಸಂಜೆ 6.00 ರ ವರೆಗೆ) ಸುಗಮವಾಗಿ ನೆನಪಿನಲ್ಲಿಟ್ಟುಕೊಳ್ಳಲು ಸೋಶಶುಬುಗುಮಂಭಾ ಎಂದು ಬಾಯಿಪಾಠ ಮಾಡಿ ಕೊಂಡು ಸೋಮವಾರ(ಸೋ)7-30 ರಿಂದ ಪ್ರತಿ ವಾರದ ಮೊದಲ ಅಕ್ಷರಕ್ಕೆ ಒಂದೂವರೆ ಘಂಟೆ ಕೂಡುತ್ತಾ ಹೋದರೆ ಸುಲಭ !