ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಸುಳಾದಿ (ವ)

||ಜತೆ||

ವೇದಗಮ್ಯಭಿನವ ಪ್ರಾಣೇಶ ವಿಠಲನ |

ಪಾದಧ್ಯಾನವನಿತ್ತು ಮೋದ ಕೊಡು ನಿತ್ಯ ||

 

||ತಾಳ ಮಟ್ಟ||

ವಾರಮಂಡಲವರ್ತಿ ವಾರಾಯನಮೂರ್ತಿ | ವಾರದಾತ ಸತತ ವಾರಜನಪ್ರೀತ |

ವಾರತ್ರಿಜಗಜೀಯ ವಾರವೃಂದಗೇಯ | ವಾರಿಜನಕ ಭಾಂಗಕಾರುಣ್ಯಾಪಾಂಗ |

ವಾರಭಿನವಪ್ರಾಣೇಶ ವಿಠಲರಂಗ ||

 

||ಧೃವತಾಳ||

ವಂದಿಸುವೆನು ಭವ ಮಂದಧಿ ತಾರಕ | ಸಿಂಧು ಶಯನ ರಾಮಚಂದ್ರನಾರ್ಚಕ

ವಸು | ಧೇಂದ್ರರಾಯರ ಕರ ಮಂದಜೋದ್ಭವ ವರ | ದೇಂದ್ರರಾಯನೆ ಯತಿ

ಚಂದಿರನೆ | ಇಂದು ಪ್ರಾರ್ಥಿಪೆ ಕರ್ಮಂದಿಗಳರಸನೆ | ಕಂದರ್ಪಜಿತ ಶರ್ಮ

ವೃಂದ ಸೇವ್ಯ | ಬೆಂದು ಭವದಿ ಬಹು ನೊಂದಿರುವೆನೋ ಸ್ವಾಮಿ |

ಮುಂದಾರಿಗಾಣದೆ ಕುಂದಿರುವೆ | ಬಂದು ಬೇಗನೆ ದಯದಿಂದ ಪಿಡಿಯೋ ಕೈಯ |

ತಂದೆ ಅಭಿನವ ಪ್ರಾಣೇಶವಿಠಲ ಪ್ರಿಯ ||

 

||ಅಟ್ಟತಾಳ||

ವರದೇಂದ್ರ ಗುರುರಾಜರಿರುವ ಕಾರಣವಿಲ್ಲಿ | ಬರುವುದು ಸಜ್ಜನ ವೃಂದ

ನಿರುತದಲ್ಲಿ | ಧರಿಸುರ ನಿಕರದಿ ಗುರುವಾಸರದಲ್ಲಿ | ಪರಮ ವೈಭವದಿಂದ |

ಮೆರೆವವಂದಣದಲ್ಲಿ | ವರುಷ ವರುಷ ಸಿತ ಕರ್ಕಸಪ್ತಮಿಯಲ್ಲಿ | ವರ ರಥವೇರಿ

ಚತುರ ಪಥದೊಳು ಸಾಗಿ | ಬರುವಂಥ ಗುರುಗಳ ದರುಶನ ಕೊಳ್ಳಲು | ಪರಿಹಾರ

ಪರಿಹಾರ ದುರಿತ ರಾಶಿಗಳೆಲ್ಲಾ | ಧರಣಿ ದೇವರುಗಳ ವರವೇದ ಘೋಷಣ |

ಹರಿದಾಸರು ಗೈವ ಭಜನ ಸುನರ್ತನ | ಪರಮ ಸಂಭ್ರಮಗಳ ವರಣಿಸಲಳವಲ್ಲ |

ಕರಿವರದಭಿನವ ಪ್ರಾಣೇಶ ವಿಠಲನ ದೂತ | ವರದೇಂದ್ರ ಯತಿವರರಿರುವ

ಕಾರಣವಿಲ್ಲಿ ||

 

 

||ಆದಿತಾಳ||

ವರುಷ ವರುಷ ಹರಿಮಾಸ ದ್ವಿತೀಯ ಪರ | ಗುರುಗಳ ಪುಣ್ಯ ದಿನೋತ್ಸವ

ಸುಜನರು | ಧರೆಯೊಳು ಎಲ್ಲೆಡೆ ಹರುಷದಿ ಮಾಳ್ಪರು | ವರ ಮಂತ್ರಾಲಯ

ಕ್ಷೇತ್ರದಿ ವಿಭವದಿ | ಗುರುವರ ರಜತ ರಥವನ್ನೇರಿ ಮೆರೆಯುವ | ಪರಿ ಪರಿ ನೂತನ

ವಾದ್ಯ ವಾದನದಿ | ಕರಿಗಳ ಮೇಲಿಹ ಭೇರಿತಾಡನದಿ | ಪರಿಕರ ಕರದಿಹ

ಕುಡಿಕೊಡೆ ಛಡಿ | ಚಾಮರ ದರ ಡಿಂಡಿಮ ತುತ್ತೂರಿ ನಾದದಿ | ಧರೆ ಸುರ ಗಢಣದಿ

ವೇದ ಸಂಘೋಷದಿ ಹರಿದಾಸರ ಭಜನೆಯ ಸಮ್ಮೇಳದಿ | ಶರಣರ ನರ್ತನ ಗಾನ

ವಿನೋದದಿ | ಹರುಷ ನಿರ್ಭರದಿ ಜಯಜಯ ಕಾರದಿ | ಸುರಪ ಮುಖ

ಎರಡೆರಡು ಬೀದಿಯಲಿ | ಮೆರೆಯುತ ಬರುತಿಹ ಗುರುಗಳ ದರ್ಶನ | ದುರಿತ

ಪಲಾಯನ ಪರಗತಿ ಸಾಧನ | ವಿರುವುದು ನಿಜ ನಿಜ ಸಂಶಯ ಸಲ್ಲದು |

ವರಯತಿರಾಟರು ಇರುವ ಕಾರಣದಿ | ಸುರಪನ ಪುರದಂತೆ ತೋರುವುದೀ ಸ್ಥಳ |

ವರಹಜ ಧುನಿ ನಂದನವನ ವೆನಿಪದು | ಕರಿವರದಭಿನವ ಪ್ರಾಣೇಶವಿಠಲನ |

ಚರಣದೊಲುಮೆ ಪಡೆದ ಗುರುರಾಜರಿರುವರಿಲ್ಲಿ ||

 

 

||ಆದಿತಾಳ||

ವೇದಗರ್ಭನೆಂಬೋ ಭೂಸುರ ರಾಮನ್ನ | ಪಾದ ಸಂದರುಶನವಾಗದಲೆ ಅ |

ನ್ನೋದಕ ಕೊಳದಿರೆ ರಾಘವ ಭಕ್ತನಿಂ | ದಾದ ಪ್ರತಿಜ್ಞೆಯನು ತಿಳಿದು ತನ್ನ

ಮೂರ್ತಿಯ | ಆದರದಿಂದಲಿ ಕೊಟ್ಟು ಕಳುಹಲಿತ್ತಾ | ಭೂದೇವ ಬಲುಕಾಲ

ಪೂಜಿಸಿ ತೀರ್ಥಯಾತ್ರೆ | ಆದರದಿಂದ ಮಾಡಿ ಕೊಳ್ಳುತ ಬರಲು ಗತಿಗೆ | ಐದುವ

ಕಾಲದಲ್ಲಿ ಸೀತಾರಾಮ ಪ್ರತಿಮೆಯ | ಮೇದಿನಿಯೊಳು ಬಿಟ್ಟು ಪೊಗಲಾಗಿ ಇತ್ತ |

ಸಾಧು ಗುಣವುಳ್ಳ ಮುಕುಂದವರ್ಮನೆಂಬ ಮೇದಿನಿಪತಿಯಾಗಿ ವಡ್ಡಿ ದೇಶದಲ್ಲಿರೆ |

ಆದುದು ಅಶರೀರವಾಕ್ಯ ಆತಗೆ ಕೇಳಿ | ಆದಿತ್ಯ ವಂಶಜ ವಿಜಯವಿಠಲ ರಾಮಾ |

ರಾಧನೆಗೊಳುತಿದ್ದ ಅಜನಿಂದ ಕೋಶದಲ್ಲಿ ||

 

||ಮಟ್ಟತಾಳ||

ವರಹಜ ತೀರದಲಿ ಚೀಕಲಪರವಿಯಲಿ | ಗಿರಿರಾಜನ ದಯದಿ ಜನಿಸಿದ

ಬಾಲರವಿ | ಪೆರೆಶುಕ್ಲನ ತೆರದಿ ವರ್ಧಿಸಿದನು ಮುದದಿ | ಉರುತರ ಬಡತನದ

ಬೇಗೆ ಯೊಳಿರುತಿರಲು | ನರಹರಿ ಯುತತನ್ನ ಉರ ಕಮಲದಿ ನಿಲ್ಲಿಸಿ | ಸ್ಥಿರ 

ಮಾನಸವಾಗಿ ತಪವಾಚರಿಸುತ್ತಿರೆ | ಹರಿ ಪ್ರೇರಣೆಯಿಂದ ಕಾಶಿಗೆ ಐತಂದು | ಹರಿ

ಪದ ಧುನಿ ಗಂಗಾ ತೀರದಿ ನೆಲೆಸುತಲಿ ಗುರುಗಳ ಧೇನಿಸುತ ತಪವಾಚರಿಸುತ |

ನರಹರಿ ಅಭಿನವ ಪ್ರಾಣೇಶ ವಿಠಲನ ಕರುಣದಿಂದಿರುತಿರ್ದ ಕೂಸಮ್ಮ ತನಯ ||

 

 

||ಜತೆ||

ವಿಜಯರಾಯರ ನಾಮ ವಿಜಯಕ್ಕೆ ಸೋಪಾನ |

ಅಜನಾಮ ಅಭಿನವ ಪ್ರಾಣೇಶ ವಿಠಲನ ನಾಮ ||

 

 

||ಮಟ್ಟತಾಳ||

ವ್ಯಾಸರಾಯರ ಉಪದೇಶವನ್ನೆಕೊಂಡು | ಭಾಸುರ ಜ್ಞಾನ ಪ್ರಕಾಶಿತ ಮನದಿಂದ |

ವಾಸುದೇವನ ಪಾದ ಸರಸಿಜ ಹೃದಯಾಕಾಶದಲಿ ನೋಡಿ | ಮೀಸಲ ಮತಿಯಲ್ಲಿ 

ದೇಶದೊಳಗೆ ಮೆರೆದು ನಾಶರಹಿತ ರಂಗ ವಿಜಯ ವಿಠ್ಠಲನ್ನ ದಾಸರೆಂದರೆ

ಪುರಂದರ ದಾಸರೆಂದೆನಿಸುತ್ತ ||

||ಮಟ್ಟತಾಳ||

ವ್ಯಾಸರಾಯರ ಉಪದೇಶವನ್ನೆಕೊಂಡು | ಭಾಸುರ ಜ್ಞಾನ ಪ್ರಕಾಶಿತ ಮನದಿಂದ |

ವಾಸುದೇವನ ಪಾದ ಸರಸಿಜ ಹೃದಯಾಕಾಶದಲಿ ನೋಡಿ | ಮೀಸಲ ಮತಿಯಲ್ಲಿ 

ದೇಶದೊಳಗೆ ಮೆರೆದು ನಾಶರಹಿತ ರಂಗ ವಿಜಯ ವಿಠ್ಠಲನ್ನ ದಾಸರೆಂದರೆ

ಪುರಂದರ ದಾಸರೆಂದೆನಿಸುತ್ತ ||

 

 

 

 


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಸುಗಮ ಕನ್ನಡ


ಶ್ರೀ. ಸುಗಮ ಕನ್ನಡ ಅವರಿಂದ ಮತ್ತಷ್ಟು ಲೇಖನಗಳು


pictureಬೀ.ಚಿ ಚಟಾಕೆಗಳು
pictureಗಂಡು-ಹೆಣ್ಣು
pictureಕುಡುಕರು
pictureಕೋರ್ಟ್-ಲಾಯರ್ರು
pictureಅಪ್ಪ-ಮಗ
pictureಭಿಕ್ಷುಕ ಬವಣೆ
pictureಹುಚ್ಚರ ಸಂತೆ
pictureಮೇಷ್ಟ್ರು-ಮಕ್ಳು
pictureಕಚೇರಿ ಜೋಕ್ಸ್
pictureಚರ್ಚಿಲ್

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2019