ಬಾಳೆ ಹಣ್ಣಿನ ದೋಸೆ
ಬೇಕಾಗುವ ಸಾಮಗ್ರಿಗಳು
- ಅರ್ಧ ಕಿಲೋ ಅಕ್ಕಿ
- ಏಳು/ಎಂಟು ಬಾಳೇ ಹಣ್ಣು,
- ಅರ್ಧ ತೆಂಗಿನ ಕಾಯಿ ತುರಿ
- ಚಿಟಿಕೆ ಉಪ್ಪು
- ತುಪ್ಪ ಸ್ವಲ್ಪ
ಮಾಡುವ ವಿಧಾನ
- ಅಕ್ಕಿಯನ್ನು ಮೂರು ಗಂಟೆ ಕಾಲ ನೆನೆಯಲು ಬಿಡಿ
- ಸುಲಿದ ಬಾಳೆ ಹಣ್ಣನ್ನು ಹಿಸುಕಿ(ಕಿವುಚಿ)ಕಾಯಿ ತುರಿ ಬೆರೆಸಿ ಚೆನ್ನಾಗಿ ರುಬ್ಬಿಕೊಳ್ಳಿ
- ಹಿಟ್ಟಿಗೆ ಉಪ್ಪು ಸೇರಿಸಿ ತಾಸು ಬಿಟ್ಟು,ತುಪ್ಪ ಸವರಿದ ತವದಮೇಲೆ ಹುಯ್ಯಿರಿ