ಮಾವಿನ ಕಾಯಿ ಚಟ್ನಿ(ಮಂಗಳೂರು ಶೈಲಿ)
ಬೇಕಾಗುವ ಸಾಮಗ್ರಿಗಳು
- ಮಾವಿನಕಾಯಿ ಎರಡು
- ಉದ್ದಿನ ಬೇಳೆ ನಾಲ್ಕು ಚಮಚ
- ತೆಂಗಿನ ಕಾಯಿ ತುರಿ ಅರ್ಧ ಬಟ್ಟಲಿ
- ಹಸಿ ಮೆಣಸಿನಕಾಯಿ ಆರು
- ಮತ್ತು ವಗ್ಗರಣೆಗೆ ಸ್ವಲ್ಪ ಎಣ್ಣೆ ಕರಿಬೇವು
- ಸಾಸಿವೆ
- ಒಣಮೆಣಸಿನ ಕಾಯಿ ನಾಲ್ಕೈದು
ಮಾಡುವ ವಿಧಾನ
- ಮಾವಿನ ಕಾಯಿ ಸಿಪ್ಪೆ, ವಾಟೆ ತೆಗೆದು ತುರಿದಿಡಿ
- ಬಾಣಲೆಯಲ್ಲಿ ಎಣ್ಣೆ ಹಾಕಿ, ಕಾದ ಎಣ್ಣೆಗೆ ಉದ್ದನ್ನು ಹಾಕಿ ಹುರುಯಿರಿ,
- ಹುರಿದ ಉದ್ದಿನ ಬೇಳೆ ಜೊತೆ ಮಾವಿನ ತುರಿ, ಕಾಯಿ ತುರಿ, ಹಸಿ ಮೆಣಸಿನಕಾಯಿ, ಉಪ್ಪು ಸೇರಿಸಿ ಸಣ್ಣಗೆ ರುಬ್ಬಿಕೊಳ್ಳಿ
- ವಗ್ಗರಣೆ ಕೊಡಿ
- (ಯಾವ ತಿಂಡಿಯ ಜೊತೆಯಲ್ಲಿ ಬೇಕಾದರೂ ನೆಂಚಿಕೊಳ್ಳಲು ರುಚಿಕರವಾದ ಚಟ್ನಿ ಇದು)