ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಉಗಾಭೋಗ (ಎ)

ಎನ್ನ ಪುಟ್ಟಿಸಿದುದಕೆ ಎನ್ನ ಸ್ನಾನವು ಎಲ್ಲ

     à²Žà²¨à³à²¨ ಪುಟ್ಟಿಸಿದುದಕೆ ಎನ್ನ ಸ್ನಾನವು ಎಲ್ಲ | ಎನ್ನ ಜಪಗಳೆಲ್ಲ ಎನ್ನ ತಪಗಳೆಲ್ಲಾ | ಎನ್ನ ಧ್ಯಾನಗಳೆಲ್ಲ ಎನ್ನ ಜ್ಞಾನವು ಎಲ್ಲ | ಎನ್ನ ಕರ್ಮಗಳೆಲ್ಲಾ ಎನ್ನ ಪೂಜೆಗಳೆಲ್ಲ | ಎನ್ನ ಭೋಜನವೆಲ್ಲ ಎನ್ನ ಮೌನಗಳೆಲ್ಲ| ಎನ್ನ ಮಾತುಗಳೆಲ್ಲ ಎನ್ನಿಂದಲೇ | ಏನೇನು ಮಾಡಿಸಿದ ಸಾಧನವು | ಎನ್ನ ಪ್ರೇರಣೆಯಿಂದ ನಿನ್ನಾಧೀನವೂ | ನಿನ್ನ ಮನಕೆ ಸರಿಬಂದಂತೆ ಮಾಡು | ಗುರುತಂದೆಗೋಪಾಲವಿಠಲ | ನಿನ್ನ ಧ್ಯಾನವನಿತ್ತು ಸಲಹೊ ಪ್ರಾಣ. 

 

ಎಷ್ಟು ನಾ ಪ್ರಾರ್ಥಿಸಲು ಶಿಷ್ಟಜನ ಪರಿಪಾಲ

     à²Žà²·à³à²Ÿà³ ನಾ ಪ್ರಾರ್ಥಿಸಲು ಶಿಷ್ಟಜನ ಪರಿಪಾಲ | ದೃಷ್ಟಿಗೆ ದ್ರುಷ್ಟನಾಗೋ ಮುಟ್ಟಿ ಭಜಿಸುವಂತೆ | ಕೊಟ್ಟು ಭಕುತಿಯನಿತ್ತು ಶಿಷ್ಟಜನಸಂಗವಿತ್ತು | ಸೃಷ್ಟಾದಿ ಅಷ್ಟಕರ್ತ ಮಹಿಮನೆ ಸ್ಪಷ್ಟರೂಪವನೆ ತೋರೊ | ಶ್ರೇಷ್ಠ ಗುರುತಂದೆ ಗೋಪಾಲವಿಠಲ | ನಿನ್ನ ಪಟ್ಟಣದೊಲಳಿಟ್ಟು ಸಲಹೊ

 

ಎಲ್ಲಿ ನೋಡಲು ನೀನಿಲ್ಲದ ಸ್ಥಳವಿಲ್ಲ

     à²Žà²²à³à²²à²¿ ನೋಡಲು ನೀನಿಲ್ಲದ ಸ್ಥಳವಿಲ್ಲ | ಎಲ್ಲರಲಿ ನೀನು , ಎಲ್ಲ ಪ್ರೇರಕ ನೀನು | ಎಲ್ಲಕ್ಕೆ ಭೇದ ಎಲ್ಲಾ ನಿರ್ಲೇಪ | ಚಿಲ್ಲರೆದೈವರ ಗಂಡ ಗೋಪಾಲವಿಠಲ ನಿನ್ನ | ಬಲ್ಲವರೆ ಬಲ್ಲರುಕಾಣೋ ಪೂರ್ಣರೇಯ.

 

ಎಷ್ಟುಮಂದಿ ಧರಣಿ ಆಳಿ ಅರಸುಗಳೆನಿಸಿ

     à²Žà²·à³à²Ÿà³à²®à²‚ದಿ ಧರಣಿ ಆಳಿ ಅರಸುಗಳೆನಿಸಿ | ನಷ್ಟವಾಗಿಪೋದರಲ್ಲ ನೋಡನೋಡಾ | ಕಟ್ಟುಕೊಂಡೊಯ್ದರೆ ತೃಣವಾದರೂ ಹಿಂದೆ | ಇಷ್ಟನಿಷ್ಟಕೆ ಪಾತ್ರರಾಗುವರು | ದಿಟ್ಟ ತಾ ಹರಿಗೋಲದಾಟಿಪನೊಂದು | ಹುಟ್ಟಲಿ ನೀರು ತಿರುಹಿ ಕದೆದಾಟಿಸೆ | ಹುಟ್ಟಿದ ಆ ಕೀರ್ತಿ ಹಾಕಿದವನದು ಎಂದು | ಕೊತ್ತವರಗುಂಟು ಬಹುಮಾನವ | ಎಷ್ಟೇ ಉದಕದಿ ಹುಟ್ಟು ಹೊರಳಿ ಆಡಿದರಕೆ | ಎಷ್ಟು ಹತ್ತೋದು ಜಲವು ಅಷ್ಟೇ ಅಲ್ಲದೆ | ಇಷ್ಟು ಹರಿಯಾಧೀನ ನಂಬಿದಂಬಿಗನಯ್ಯ| ಇಷ್ಟರೊಳು ಚಲುವ ಗೋಪಾಲವಿಠಲ | ಇಷ್ಟನಾಗಿ ಸರ್ವಾಭೀಷ್ಟಗಳನೀವ.

 

ಎಂತು ಪೋಪದು ಮನದ ಕಿಂತು ಎಂಬೋದು

     à²Žà²‚ತು ಪೋಪದು ಮನದ ಕಿಂತು ಎಂಬೋದು ಎನ್ನ | ಅಂತರಂಗದಲಿಪ್ಪನು ಸುಂದರಾಂಗ | ಪಿಂಟಿನ ಸಂಸಾರ ಮರದುಪೋಗಿತ್ತು ಈಗ | ಚಿಂತನೆಗೆ ಬಂದು ಬಹುದಣಿಸುವುದು | ಎಂತು ವಿಹಿತದಲ್ಲಿ ಬಿಡಿಸುವೆ ಈ ಅರ್ಥ | ನಿಂತಲ್ಲಿ ಕುಳಿತಲ್ಲಿ ಹತ್ತಿಹ್ಯದು | ನಿಂತು ಮಾತೆಯಲ್ಲಿ ಪುಟ್ಟಿಸಿದವನಾರು | ಚಿಂತಾಯಕದೇವ ಗೋಪಾಲವಿಠಲ | ನಿಸ್ಚಿಂತನಿಗೆ ವಿಷಯನಾಗಿರು ಸರ್ವದಾ.

 

ಎಡಕೆ ಭಾವಿಯುಂಟು

     à²Žà²¡à²•ೆ ಭಾವಿಯುಂಟು, ಬಲಕೆ ಕೆರೆ ನೋಡು | ಮುಂದೆ ಕಾಡ್ಗಿಚ್ಚು ಹತ್ತಿತು ಯೆಲೊ ದೇವ | ಹಿಂದೆ ಹುಲಿ ಬೆನ್ನಟ್ಟಿಬರುತಲಿದೆ | ಯಾರಿಗೆಯಾರೋ ಪುರಂದರವಿಠಲ.

 

ಎಡಗೈಯಿಂದಲಿ ನೀರು ಅಭ್ಯಂಗಾಚಮನ

     à²Žà²¡à²—ೈಯಿಂದಲಿ ನೀರು ಅಭ್ಯಂಗಾಚಮನ | ಪೊಡವಿಯೊಳಗೆ ದಾನಮಾಡಿದ ಮನುಜಗೆ | ಎಡೆ ಮೃತ್ಯು ದಾರಿದ್ರ್ಯ ಠಾಕೆ, ಕಟ್ಟುವುದು ಎಂದು | ಒಡನೆ, ಶ್ರುತಿ, ಸ್ಮೃತಿ ಪೇಳುವುದೋ | ಬಡವರಾಧಾರಿ ಶ್ರೀಪುರಂದರವಿಠಲನ್ನ ಸರಿ | ಅಡಿಗಳರ್ಚಿಸಿ ಬಾಳೋ ಅಬ್ಜದಂತೆ.

ಎಡದ ಕೈಯಿಂದ ನೀರ ಎತ್ತಿ

     à²Žà²¡à²¦ ಕೈಯಿಂದ ನೀರ ಎತ್ತಿ ಬಲದ ಕೈಯಲಿಟ್ಟು | ಕುಡಿದರೆ ಆರಾಧರಾಪೋಶನಕ್ಕೆ ಮತ್ತದು ಮದ್ಯ | ಎಡೆಯನ್ನ ಗೋಮಾಂಸವೆಂದು ಶ್ರುತಿ ಸಾರುತಿದೆ | ಪೊಡವಿಯಲ್ಲಿ ಪುರಂದರವಿಠಲನಾಜ್ಞೆ.

 

ಎದೆಯನಾಡಿನಲೊಂದು ಸೋಜಿಗ ಹುಟ್ಟಿ

     à²Žà²¦à³†à²¯à²¨à²¾à²¡à²¿à²¨à²²à³Šà²‚ದು ಸೋಜಿಗ ಹುಟ್ಟಿ | ಮಿಡಿದು ಮಾಡಿದಂಥ ಕಣಕದ ರೊಟ್ಟಿ | ಅದಕೆ ಸಾಧನ ತೊವ್ವೆ ತುಪ್ಪವನೊಟ್ಟಿ | ಅದರಮೇಲೆ ಸಕ್ಕರೆಯನು ಒಟ್ಟಿ | ಅವನು ಮಲಬಲ್ಲ ಅವ ಜಗಜಟ್ಟಿ | ಪುರಂದರವಿಠಲ ಸುಲಭವು ಗಟ್ಟಿ.

 

ಎನ್ನ ಕಡೆಹಾಯಿಸುವುದು ನಿನ್ನ ಭಾರ

     à²Žà²¨à³à²¨ ಕಡೆಹಾಯಿಸುವುದು ನಿನ್ನ ಭಾರ | ನಿನ್ನ ನೆನೆಯುತಲಿಹುದು ಎನ್ನ ವ್ಯಾಪಾರ | ಎನ್ನ ಸತಿ ಸುತರಿಗೆ ನೀನೆ ಗತಿ | ನಿನ್ನೊಪ್ಪಿಸುವುದು ನನ್ನ ನೀತಿ | ಎನ್ನ ಪಡಿ ಇಕ್ಕಿ ಸಲಹುವುದು ನಿನ್ನ ಧರ್ಮ | ನಿನ್ನ ಅಡಿಗೆರಗುವುದು ಎನ್ನ ಕರ್ಮ | ಎನ್ನ ತಪ್ಪುಗಳೆನೆಣಿಸುವುದು ನಿನ್ನದಲ್ಲ | ನಿನ್ನ ಮರೆತು ಬದುಕುವುದು ಯೆನ್ನದಲ್ಲ | ನೀನಲ್ಲದಿನ್ನಾರಿಗೆ ಮೊರೆಯಿಡುವೆ ಪುರಂದರವಿಠಲ.

 

ಎನ್ನಮ್ಮ ಸಿರಿದೇವಿ

     à²Žà²¨à³à²¨à²®à³à²® ಸಿರಿದೇವಿ, ಇನ್ನು ಅರಿಯಳು ಮಹಿಮೆ | ಕುನ್ನಿ ಮಾನವನು, ನಾನೇನು ಬಲ್ಲವನೆ? | ಪನ್ನಗಾದ್ರಿನಿಲಯನೇ, ಪರಮಪಾವನ್ನ ಕೃಷ್ಣ | ಯೆನ್ನನುದ್ಧರಿಸಯ್ಯಾ ಪುರಂದರವಿಠಲ.

 

ಎರಡು ಗಳಿಗೆ ಬೆಳಗು ಇರಲು

     à²Žà²°à²¡à³ ಗಳಿಗೆ ಬೆಳಗು ಇರಲು ಗೃಹಸ್ಥಗೆ ಸ್ನಾನ | ಕರಾವ ಮುಗಿದು ಮಾಡು ಸಂಕಲ್ಪವೇದ | ಪರಮ ಪುಣ್ಯ ಬ್ರಾಹ್ಮಣ ಧರ್ಮವೆಂದು | ಪುರಂದರವಿಠಲನು ಮೆಚ್ಚಿ ಪಾಲಿಸುವ.

 

ಎರಿಗಿ ಭಜಿಪೆನೊ ನಿನ್ನ ಚರಣಸನ್ನಿಧಿಗೆ

     à²Žà²°à²¿à²—ಿ ಭಜಿಪೆನೊ ನಿನ್ನ ಚರಣಸನ್ನಿಧಿಗೆ | ಕರುಣದಿಂದಲಿ ನಿನ್ನ ಸ್ಮರಣೆಯ ಯೆನಗಿತ್ತು | ಮರೆಯದೆ ಸಲಹೋ ಶ್ರೀಪುರಂದರವಿಠಲ.

ಎಲ್ಲಾ ಒಂದೇ ಎಂಬುವರ ಎರಡು

     à²Žà²²à³à²²à²¾ ಒಂದೇ ಎಂಬುವರ ಎರಡು ದಾಡಿಯಲಿದ್ದ | ಹಲ್ಲುದುರೆ ಬಡಿಯಬೇಕು ಹರಿಭಕ್ತರಾದವರು | ಸಲ್ಲದು ಸಲ್ಲದು ಈ ಮಾತು ಇದಕೆ ಸಂಶಯಬೇಡ | ಕಲ್ಲ ನಾರಿಯಮಾಡಿದ ಪುರಂದರವಿಠಲಣ | ಪಲ್ಲವಾ೦ಘ್ರಿಯನೆನೆದು ಪರಗತಿಯ ಪಡೆಯಿರೊ.

 

ಎಲ್ಲ ಒಂದೆಂಬರ ಉದರವನ್ನೇ ಸೀಳಿ

     à²Žà²²à³à²² ಒಂದೆಂಬರ ಉದರವನ್ನೇ ಸೀಳಿ | ಹಲ್ಲುದರಗುಟ್ಟಳಿಬೇಕು ಹರಿಭಕ್ತರಾದವರು | ಸಲ್ಲದು ಸಲ್ಲದು ಈ ಮಾತು, ಸಂಶಯಬ್ಯಾಡಿ | ಕಲ್ಲುನಾರಿಯ ಮಾಡಿದ  à²ªà³à²°à²‚ದರವಿಠಲ.

ಎಲ್ಲಿ ಹರಿಕಥಾಪ್ರಸಂಗವೊ

     à²Žà²²à³à²²à²¿ ಹರಿಕಥಾಪ್ರಸಂಗವೊ ಅಲ್ಲಿ ಯಮುನಾ | ಗಂಗಾ, ಗೋದಾವರೀ, ಸರಸ್ವತಿ | ಎಲ್ಲ ತೀರ್ಥವು ಬಂದು ಎಣೆಯಾಗಿ ನಿಲ್ಲಲ್ಲು | ಸಿರಿವಲ್ಲಭ ಪುರಂದರವಿಠಲ ಮೆಚ್ಹಲು, ಜಯ ಜಯ.

 

ಎಲೆ ಜಿಹ್ವೆ ಕೇಶವನ ನಾಮವನೆ ಸ್ತುತಿಸು

     à²Žà²²à³† ಜಿಹ್ವೆ ಕೇಶವನ ನಾಮವನೆ ಸ್ತುತಿಸು | ಎಲೆ ಕರಗಳಿರ, ಶ್ರೀಹರಿಯ ಪೂಜೆಯಮಾಡಿ | ಎಲೆ ನೇತ್ರಗಳಿರ,  à²¶à³à²°à³€à²•ೃಷ್ಣನ ಮೂರ್ತಿಗಳ ನೋಡಿ | ಎಲೆ ಕಾಲುಗಳಿರ, ಶ್ರೀಹರಿಯ ಯಾತ್ರೆಯ ಮಾಡಿ | ಎಲೆ ನಾಸಿಕವೆ, ಮುಕುಂದನ ಚರಣ ಪರಿಮಳವನಾಘ್ರಾಣಿಸುತಿರು | ಎಲೆ  à²¶à²¿à²°à²µà³†, ನೀನಧೋಕ್ಷಜನ ಪಾದ ಜಲರುಹದಲ್ಲಿ ಎರಗಿರು | ಎಲೆ ಮನವೆ, ನೀ ವರದ ಕೇಶವ ಪುರಂದರವಿಠಲನ | ಭಕುತಿ ವಿಷಯಗಳಲ್ಲಿ ಅನುದಿನವು ಕಳೆಯುತ್ತಿರು.

 

ಎಂದಿಗಾದರೂ ನಿನ್ನ  à²ªà²¾à²¦à²¾à²°à²¾à²µà²¿à²‚ದವೇ

     à²Žà²‚ದಿಗಾದರೂ ನಿನ್ನ  à²ªà²¾à²¦à²¾à²°à²¾à²µà²¿à²‚ದವೇ ಗತಿಯೆಂದು ನಂಬಿದೇನೊ | ಬಂಧುಬಳಗವ ಬಿಟ್ಟು ಬಂದೆ ನಿನ್ನ ಮನೆಗಿಂದು | ಮಂಧರಧರ ಗೋವಿಂದ ಪುರಂದರವಿಠಲನೆ, ನೀ ಬಂಧು.

 

ಎನ್ನೊಡೆಯನೆ  à²¹à²¨à³à²®

     à²Žà²¨à³à²¨à³Šà²¡à³†à²¯à²¨à³†  à²¹à²¨à³à²® | ಹನುಮನೇ ಎನ್ನೊಡೆಯ | ಘನ್ನ ಕದರುಮಂಡಲಗಿ | ಹನುಮಯ್ಯ ಎನ್ನ  à²’ಡೆಯ | ಎನ್ನಯ್ಯ ಶ್ರೀ ತಂದೆ ಮುದ್ದುಮೋಹನವಿಠಲ ಭಕ್ತ | ಘನ್ನ ಹನುಮಯ್ಯನೇ ಎನ್ನ ಒಡೆಯ.

ಎನಗೆ ವೈಕುಂಠದಲ್ಲಿ ಯೋಗಿಗಳ

     à²Žà²¨à²—ೆ ವೈಕುಂಠದಲ್ಲಿ ಯೋಗಿಗಳ ಹೃದಯದಲ್ಲಿ | ಇನನ ಮಂಡಲದಲ್ಲಿ, ಎಲ್ಲೆಲ್ಲಿರಲು ಶ್ಯಾರದೋ | ಎನ್ನ ಭಕ್ತರ ನೆರೆಗಾನಕಾನೆಲೆ - | ಗೊಂಬೆ ಮುನಿನಾರದ  à²•ೇಳೆಂದು ಮುದ್ದುವಿಠಲನೆಂದ.

 

ಎಲ್ಲ ಒಂದೆಂಬರ ಎರೆಡು ದಾಡೆಯಲಿರ್ದ

     à²Žà²²à³à²² ಒಂದೆಂಬರ ಎರೆಡು ದಾಡೆಯಲಿರ್ದ | ಹಲ್ಲುದರ ಬಡಿಯಬೇಕು ಹರಿಭಕ್ತರಾದವರು | ಸಲ್ಲದು ಸಲ್ಲದು ಎನಲಾಗದು ಸಂಶಯಬೇಡ | ಕ್ಷುಲ್ಲಕ ಸ್ವಾಮಿದ್ರೋಹಿಯ ಕ್ಷುರದಿ ಖಂಡಿಸಬೇಕು | ಕಲ್ಲು ನಾರಿಯಮಾಡಿದ,ಶ್ರೀ ರಾಮಕೃಷ್ಣನ | ಪಲ್ಲವಾ೦ಘ್ರಿಯ ನೆನೆದು ಪರಗತಿ ಪಡೆಯಿರೋ.

 

ಎನ್ನ ಮನದ ಹರಿದಾಟವನು ಕಳೆಯೋ

     à²Žà²¨à³à²¨ ಮನದ ಹರಿದಾಟವನು ಕಳೆಯೋ ವೈಕುಂಠ | ಧಣಿ ದಾಸರೊಡನಾಟ ಕನಿಕರದಿಂ ಕರುಣಾದ್ವೆಂಕಟ | ಘನವಾದ ಸಂಕಟವನು ಕಳೆದು ತವನಿಷ್ಠೆ- | ಯನು ಪಾಲಿಸೈ ಶಿಷ್ಟಜನವರದ ಶ್ರೀರಾಮ.

 

ಎಂತಾದರು ಬಿದಡೆನಯ್ಯ ಕಂತುಜನಕ

     à²Žà²‚ತಾದರು ಬಿಡೆನಯ್ಯ ಕಂತುಜನಕ ನಿಮ್ಮ ಪಾದ- | ದಂತಃಕರಣ ಪಡೆವನಕ ಕುಂತಿಸುತರ ಪಾಲ | ಚಿಂತೆ ಪರಿಹಾರನೆ ಭಕ್ತಾನ್ತರಂಗನೆ ಎನ್ನೊ- | ಳಿ೦ತು ನಿರ್ದಯಬೇಡ ಸಂತರೊಡೆಯ ಶ್ರೀರಾಮ.

 

ಎಲ್ಲಿದ್ದರೇನು ನೀ ವಿಶ್ವವ್ಯಾಪಕನೆಂದು

     à²Žà²²à³à²²à²¿à²¦à³à²¦à²°à³‡à²¨à³ ನೀ ವಿಶ್ವವ್ಯಾಪಕನೆಂದು | ಬಲ್ಲೆನೋ ಬಹಳಬಗೆಯಿಂದ ನಾನು | ಸಲ್ಲುವುದೋ ನಮ್ಮ ಸಲಹುವ ಸಖನಾಗಿ ಶ್ರೀ- | ವಲ್ಲಭ ನಾನು ಎಲ್ಲಿದ್ದರೇನು | ನಿಲ್ಲಯ್ಯ ವರದಗೋಪಾಲವಿಠಲ | ಸೊಲ್ಲು ಲಾಲಿಸಿ  à²¸à²²à²¹à³‹ ಸತಿ ಶಿಶುವಿನ.

 

ಎಲೊ ಶುಕನೆ ಕೇಳು ನೀ

     à²Žà²²à³Š ಶುಕನೆ ಕೇಳು ನೀ ಬಲುಸುಖಿಯೋ ಪೂರ್ವದಲಿ | ಕೆಲಕಾಲ ನೀ ಬಳ್ಳಿ ಎಲ್ಲ | ಲಲಿತರಸಾಲಫಲ ಪಲ್ಲವ ಮೆಲುವ ನಿನಗೆ | ಬೆಲೆಯೇನಯ್ಯ ನೆಲೆಸಿಲುಕಿದೆ ಗೆಳೆತನಕೆ | ನೆಲೆಯಾವುದೊ ಎನಗೇನು ಗತಿ ಎಲೆ ಪ್ರಿಯನೆ | ಬಲುವ್ಯಾಕುಲವ ಬಿಡಿಸಿ ಸುಲಲಿತದಲಿ | ಸಲಹೋ ಶ್ರೀವರದ ಗೋಪಾಲವಿಠಲ ಪ್ರಿಯನೆ | ಸಿಲುಕೆದೆಯೋ ಇಂದಿನ ದಿನ ಸುದಿನವಯ್ಯ.

ಎನಗೆ ನಿನ್ನಲ್ಲಿ ಭಕ್ತಿ ಇರಲಿ

     à²Žà²¨à²—ೆ ನಿನ್ನಲ್ಲಿ ಭಕ್ತಿ ಇರಲಿ ಇಲ್ಲದಿರಲಿ | ಜನರು, ಹರಿದಾಸನೆಂದೆನ್ನ ಕರೆಯುತಾರೆ | ಮನಪಾಪ ಕರಗುವಂತೆ ಅನುದಿನವು ನೀ | ಎನ್ನ ಸಲಹಬೇಕಾಯಿತೆ | ಅನಿಮಿತ್ತಸುಜನಬಂಧು | ಕನಸೀಲಿ ಯಮಭಟರೆನ್ನ ಎಳೆದೊಯ್ವಾಗ | ಘನತೆಗೆ ಸಾಲದಯ್ಯ ತನ್ನವರ ಹಯವದನ | ಅನ್ಯರಿಗೊಪ್ಪಿಸಿದನೆಂಬೊ ದುರ್ವಾರ್ತೆ | ತಪ್ಪಿಸಿಕೊಳ್ಳೋ ತಂದೆ ಮುನಿಜನವಂದ್ಯ.

 

ಎಂದಿಗೆ ಕಾಂಬೆ ನಾಬೆಳಗು

     à²Žà²‚ದಿಗೆ ಕಾಂಬೆ ನಾಬೆಳಗು  à²®à³à²‚ದಿನ್ನು | ಸಂಧಿಸಿದೆ ಕಾಳುಗತ್ತಲೆ ಸುತ್ತಲಿ | ಮಂದಿ ಸಂಗತಿಯ ಈ ಮಾರ್ಗದಲಿ ದೊರೆಯಲಿಲ್ಲ | ಒಂದು ಗ್ರಾಮಕೆ ವೈದು ಸೇರಿಸದೊ |

 

 

 


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಸುಗಮ ಕನ್ನಡ


ಶ್ರೀ. ಸುಗಮ ಕನ್ನಡ ಅವರಿಂದ ಮತ್ತಷ್ಟು ಲೇಖನಗಳು


pictureಬೀ.ಚಿ ಚಟಾಕೆಗಳು
pictureಗಂಡು-ಹೆಣ್ಣು
pictureಕುಡುಕರು
pictureಕೋರ್ಟ್-ಲಾಯರ್ರು
pictureಅಪ್ಪ-ಮಗ
pictureಭಿಕ್ಷುಕ ಬವಣೆ
pictureಹುಚ್ಚರ ಸಂತೆ
pictureಮೇಷ್ಟ್ರು-ಮಕ್ಳು
pictureಕಚೇರಿ ಜೋಕ್ಸ್
pictureಚರ್ಚಿಲ್

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2025