ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಸುಳಾದಿ (ಘ)

||ಧೃವತಾಳ||

ಘನದಯಾನಿಧಿಯಾದ ಪವನರಾಯನೆ ನಮೋ | ಪುನರಪಿ ನಮೋ ನಿನ್ನ ಪಾದ

ಸರಸಿರುಹಕೆ | ಮಣಿದು ಬೇಡಿಕೊಂಬೆ | ನೀನೇವೆ ಗತಿ ಎಂದು | ನಿನಗಿಂತ

ಹಿತರಾರು ಜೀವನಕೆ | ಸನಕಾದಿ ವಂದ್ಯನ್ನ ಅಜ್ಞಾನದಿಂದಲಿ ಪರಮ ಅಣುಗಳಲ್ಲಿ

ವ್ಯಾಪ್ತನಾಗಿ ಬಿಡದೆ | ಅಣುರೂಪಗಳಿಂದ ನಿಂದು ಮಾಡಿದ ಕೃತ್ಯ | ಮನಸಿಜ 

ವೈರಿಯಿಂದ ತಿಳಿಯಲೊಶವೆ | ಹೀನ ಮನಸ್ಸಿನಿಂದ ಬದ್ಧನಾದವ ನಾನು |

ಗುಣರೂಪಕ್ರಿಯೆಗಳ ವಿದಿತನೇನೋ | ತನುವಿನೊಳಗೆ ಮೂರು ಕೋಟ್ಯಧಿಕ

ಎಪ್ಪತ್ತೆರಡು | ಎನಿಪ ಸಾಸಿರ ರೂಪದಿಂದ ಸತಿಯ ಸಹಿತ | ತೃಣ ಮೊದಲಾದ

ಜೀವ ಪ್ರಕೃತಿ ಕಾಲಕರ್ಮ | ಅನುಸಾರವಾಗಿ ಕ್ರಿಯೆಗಳನೆ ಮಾಡಿ | ಅನಿಮಿತ್ತ

ಬಾಂಧವನೆನಿಪ ಸಜ್ಜನರಿಗೆ ಜ್ಞಾನ ಭಕ್ತ್ಯಾದಿಗಳ ನೀನೆ ಇತ್ತು | ಮನದಲ್ಲಿ ಹರಿರೂಪ

ಸಂದರ್ಶನವಿತ್ತು | ಘನಿಭೂತವಾದ ಆನಂದದಿಂದ | ವಿನಯದಿಂದಲಿ ಪೊರೆವ

ಉಪಕಾರ | ವನು ಸ್ಮರಿಸಲಾಪೆನೆ ಎಂದೆಂದಿಗೆ ಗುಣ ನಿಧಿಯೆ | ಇನಕೋಟಿ ತೇಜ

ಗುರು ವಿಜಯ ವಿಠಲರೇಯ | ಇನಿತು ನಿನ್ನೊಳು ಲೀಲೆ ಮಾಡುವ ಆವಕಾಲ ||


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಸುಗಮ ಕನ್ನಡ


ಶ್ರೀ. ಸುಗಮ ಕನ್ನಡ ಅವರಿಂದ ಮತ್ತಷ್ಟು ಲೇಖನಗಳು


pictureಬೀ.ಚಿ ಚಟಾಕೆಗಳು
pictureಗಂಡು-ಹೆಣ್ಣು
pictureಕುಡುಕರು
pictureಕೋರ್ಟ್-ಲಾಯರ್ರು
pictureಅಪ್ಪ-ಮಗ
pictureಭಿಕ್ಷುಕ ಬವಣೆ
pictureಹುಚ್ಚರ ಸಂತೆ
pictureಮೇಷ್ಟ್ರು-ಮಕ್ಳು
pictureಕಚೇರಿ ಜೋಕ್ಸ್
pictureಚರ್ಚಿಲ್

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2019