ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಸುಳಾದಿ (ತ)

||ಅಟ್ಟತಾಳ||

ತಪ ಮಾಡಿ ಇಕ್ಷ್ವಾಕು ಬ್ರಹ್ಮನ ಮೆಚ್ಚಿಸಿ | ಕೃಪೆಯಲ್ಲಿ ಮೂಲರಾಮನ ಕೊಡಲಿತ್ತಲು

ಕ್ಷಿತಿಯೊಳಗೆ ಅಯೋಧ್ಯದಲ್ಲಿ ಪೂಜಿಸಲಾಗಿ | ಅತಿಶಯವಾಗಿ ರಾಮಚಂದ್ರ

ಪರಿಯಂತ | ಮಿತಿ ಇಲ್ಲದ ವೋಲಗದಲ್ಲಿ ಒಪ್ಪಲು | ಕ್ಷಿತಿಸುತೆ ತಾನೆ ಪೂಜಿಸಿ

ಹನುಮಂತಗೆ | ಪ್ರತಿಮೆಯ ಪಾಲಿಸೆ ಅಲ್ಲಿಂದ ಮಾರುತ | ಸುತನು 

ಜಾಂಬುವಂತಗೆ ದಯ ಮಾಡಿದ | ಸತತ ಮಂಗಳ ಕಾಯಾ ವಿಜಯವಿಠಲ

ರಾಮಾ | ನುತಿಸಿಕೊಳುತಲಿದ್ದ ಸುರರಾದಿಗಳ ಕೈಯಾ ||

 

 

||ಮಟ್ಟತಾಳ||

ತರುಳತನದಲ್ಲಿ ಘೋರರೋಗದಿಂದ | ಧರೆಯಾಸೆಯ ನಾನು ತೊರೆದಿರಲು ನಿನ್ನ |

ಚರಣಕಿಂಕರರಾದ ವರದೇಶದಾಸರು | ಹರಿದಾಸನು ಇವನು ಕರುಣವ

ತೋರೆಂದು | ಹರಿ ನಿನ್ನಡಿಯಲ್ಲಿ ಮೊರೆಯಿಡಲಾಕ್ಷಣದಿ | ವರಭಕ್ತರ ನುಡಿಯ

ಲಾಲಸಿಯೆನ್ನನು | ಕರೆದು ತಂದಿದೇವ ನಿರಯನಗರದಿಂದ |

ಕರುಣಾರ್ಣವಭಿನವಪ್ರಾಣೇಶವಿಠಲನೆ | ಮರೆದು ನಿನ್ನಯ ನಾಮ

ನರಕಭಾಜನನಾದೆ ||

 

 

||ಮಟ್ಟತಾಳ||

ತ್ವರವಾಟದಿ ಜನಿಸಿ ವರದೇಂದ್ರರನೊಲಿಸಿ | ಮರುತಾಗಮ ಗಳಿಸಿ ತುರುರಕ್ಷಕ

ದಾಸ | ವರಿಯರ ಕರುಣದಲಿ ಶರಧಿಜ ಭಾಗದಲಿ | ಧರಣಿಪ ವಿಠಲೆಂಬೊ

ಸುರುಚಿರದಂಕಿತವ | ದೊರಕಿಸಿ ಪ್ರಾಕೃತದಿ ಕರುಣಾಕರ ಶ್ಯಾಮ ಸುಂದರ

ನೊರ್ಣಿಸಿದಾ ಪರಮ ಭಾಗವ | ತರ ನೆರೆ ನಂಬೊ ನಿರುತಾ ||

 

||ತ್ರಿವಿಡಿತಾಳ||

ತಾಮಸ ಗುಣವುಳ್ಳ ಪಾಮರ ಜನರಿಗೆ | ಈ ಮಹಿಮೆ ದೊರಕುವುದೇ ಸ್ವಾಮಿ

ಸಿಲುಕುವನೆ ಕಾಮಿಸಿ ಕೋಟಿ ವರುಷ ನಾಮ ನುಡಿಯೆ ಪರಂ | ಧಾಮ

ದೊರಿಯದು ಭೂಮಿಯೊಳಗಿದ್ದ | ಭ್ರಾಮಕ ಜನರಿಗೆ ವಾಮದೇವನೆ

ಹಿರಿಯನೆಂದು ಬುದ್ಧಿಯ ಕೊಡುವ | ಕಾಮಾರಿ ವಂದ್ಯ ನಮ್ಮ ವಿಜಯ ವಿಠಲನು |

ಸಾಮಾನ್ಯ ಜನರಿಗೆ ದೊರಕುವನೇ ಕೇಳಿ ||


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಸುಗಮ ಕನ್ನಡ


ಶ್ರೀ. ಸುಗಮ ಕನ್ನಡ ಅವರಿಂದ ಮತ್ತಷ್ಟು ಲೇಖನಗಳು


pictureಬೀ.ಚಿ ಚಟಾಕೆಗಳು
pictureಗಂಡು-ಹೆಣ್ಣು
pictureಕುಡುಕರು
pictureಕೋರ್ಟ್-ಲಾಯರ್ರು
pictureಅಪ್ಪ-ಮಗ
pictureಭಿಕ್ಷುಕ ಬವಣೆ
pictureಹುಚ್ಚರ ಸಂತೆ
pictureಮೇಷ್ಟ್ರು-ಮಕ್ಳು
pictureಕಚೇರಿ ಜೋಕ್ಸ್
pictureಚರ್ಚಿಲ್

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2019