ಉಗಾಭೋಗ (ಖ)
ಖಳರ ನೋಟವೆ
ಖಳರ ನೋಟವೇ ಹಾವಲ್ಲದೆ| ಹಾವ ಬೇರಿನ್ನರಸಲ್ಯಾತಕೆ
ಖಳರ ನೋಟವೇ ಹುಲಿಯಲ್ಲವೆ|ಹುಲಿಯ ಬೇರಿನ್ನರಸಲ್ಯಾತಕೆ
ಖಳರ ನೋಟವೆ ವಿಷವಲ್ಲದೆ| ವಿಷವು ಬೇರಿನ್ನರಸಲ್ಯಾತಕಯ್ಯಾ|
ಖಳರೊಳಗೆನ್ನ ಹುಟ್ಟಿಸಿದೆ| ಖಳರಿಗೊಪ್ಪಿಸಿಕೊಟ್ಟೆಯಲ್ಲ|
ಖಳರ ಖಂಡದಿಂಡೆಯ ಮುರಿವನೋ|
ಖಳರ ನಿವಾರಣ ಪುರಂದರ ವಿಠಲ ||೧||