ಕಗ್ಗ ( ಋ )ಋಣದ ಮೂಟೆಯ ಹೊರಿಸಿ ಪೂರ್ವಾ ರ್ಜಿತದ ಹುರಿಯ । ಕುಣಿಕೆಯಲಿ ನಿನ್ನ ಕೊರಳನು ಬಿಗಿದು ವಿಧಿಯು ।। ತೃಣದ ಕಡ್ಡಿಯ ಮುಂದೆ ಹಿಡಿದಾಶೆ ತೋರುತಿರೆ । ಕುಣಿವ ಗಾರ್ದಭ ನೀನು ಮಂಕುತಿಮ್ಮ ।।