ಸುಗಮ ಆರೋಗ್ಯ, ಸುಗಮ ಪಾಕಶಾಲೆ ನಂತರ ಆರೋಗ್ಯದ ಬಗ್ಗೆ ಮಾಹಿತಿ ನಡೆಯುವ ಒಂದು ಜಂಟಿ ಕಾರ್ಯಕ್ರಮ.ಸುಗಮ ಆರೋಗ್ಯದ ಗುರಿ ಆರೋಗ್ಯ,ಸೌಂದರ್ಯ ಮತ್ತು ಸಂತೊಷದ ಸಂಪೂರ್ಣ ಮಾಹಿತಿ ನೀಡುವುದಾಗಿದೆ.ಆರೋಗ್ಯ ಈ ಕಾಲದ ಜೀವನ ಮತ್ತು ವಾತವರಣದ ಹಲವಾರ ಮುಖಗಳ ಬಗ್ಗೆ ಮಾಹಿತಿಯನ್ನ ನಿಮ್ಮ ಮುಂದೆ ಉಚಿತವಾಗಿ ತರಲು ನಾವು ಬದ್ದರಾಗಿದ್ದಿವಿ.
ಆರೋಗ್ಯವನ್ನು ನಾವು ಆಸ್ಪತ್ರೆಗಳಿಂದ ವೈದ್ಯರಿಂದ ಪಡೆಯುತ್ತೇವೆ ಎಂಬ ಭಾವನೆಯೇ ಇಂದು ವ್ಯಾಪ್ತವಾಗಿದೆ ಆದರೆ ಆಯುರ್ವೇದ ಹೇಳುತ್ತದೆ ನಮ್ಮ ಆರೋಗ್ಯ ವರ್ಧನೆಗೆ ಆಹಾರ ಸಿಗುವುದು ನಮ್ಮ ಅಡುಗೆ ಮನೆಯಲ್ಲಿಯೇ ಎಂದು . ಆಯುರ್ವೇದ ಕೇವಲ ಚಿಕಿತ್ಸಾ ಶಾಸ್ತ್ರವಲ್ಲ . ಆರೋಗ್ಯಕರ ಜೀವನ ನಡೆಸುವ ಒಂದು ಮಾರ್ಗ ಆಹಾರವೇ ಔಷಧವಾಗಿ ಉಪಯೋಗವಾಗುವ ನಿಟ್ಟಿನಲ್ಲಿ ಒತ್ತು ಕೊಟ್ಟಿರುವ ಶಾಸ್ತ್ರ
ಆಧುನಿಕ ಚಿಕಿತ್ಸಾ ಸೌಲಭ್ಯಗಳಂತೆ ರಾಸಾಯನಿಕ ಪದಾರ್ಥಗಳಿಂದ ತಯಾರಿಸಿದ ಔಷಧಿಗಳು ಅಪಾಯಕಾರಿ ಪರಿಣಾಮಗಳನ್ನು ಬೀರುತ್ತಿರುವುದನ್ನು ಗಮನಿಸಿ ಈಗ ಪ್ರಪಂಚದೆಲ್ಲೆಡೆ ಆಯುರ್ವೇದದ ಕಡೆ ಎಲ್ಲರ ಗಮನ ಹರಿದಿದೆ ದುಬಾರಿ ವೈದ್ಯಕೀಯ ಸೌಲಭ್ಯಗಳಿಂದ ವಂಚಿತರಾದ ಕೋಟ್ಯಾಂತರ ಹಳ್ಳಿಯ ಜನ ಆಯುರ್ವೇದದ ಉಪಯೋಗ ಪಡೆದು ಆರೋಗ್ಯ ಭಾಗ್ಯದ ಅನುಭವದಲ್ಲಿದ್ದಾರೆ .
ಭಾರತ ದೇಶದ ಮಸಾಲೆ ಸಾಮಾನುಗಳಿಂದಲೇ ಎಷ್ಟೋ ರೋಗಗಳಿಗೆ ಔಷಧಿ ಮನೆಯಲ್ಲೇ ಮಾಡಬಹುದು ಮನೆಯ ಹಿತ್ತಲ ಗಿಡಮೂಲಿಕೆಗಳೇ ಸಣ್ಣಪುಟ್ಟ ತೊಂದರೆಗಳಿಗೆ ನಿವಾರಣೆ ನೀಡಬಲ್ಲದು ಅಜ್ಜಿ ಹೇಳಿದ ಶುಂಠಿ ಕಷಾಯತುಳಸಿ ಅರಿಶಿನದ ಹಾಲು ಕುಡಿದು ಅದೆಷ್ಟು ಜನರ ಜ್ವರ ಕೆಮ್ಮು ನೆಗಡಿಗಳ ಉಪಶಮನ ಆದ ಅನುಭವ ನೆನಪಿದೆಯಲ್ಲವೆ ?
ನಮ್ಮ ಸಮುದಾಯದವರೇ ಆದ ಶ್ರೀಮತಿ . ಇಂದು ನಾರಾಯಣ್(ರಾಜು) ಆಯುರ್ವೇದ ಚಿಕಿತ್ಸೆಯನ್ನು ಸಿಡ್ನಿಯಲ್ಲೇ ಸುಮಾರು ವರ್ಷಗಳಿಂದ ನಡೆಸುತ್ತಿದ್ದು ಈದಿನ ನಮಗಾಗಿ ಕೆಲವು ಮನೆಮದ್ದು ಗಳ ಪರಿಚಯ ಮಾಡಿಕೊಡಲಿದ್ದಾರೆ .
೫. ಮಕ್ಕಳ ಮನಃಶಾಸ್ತ್ರ ಮತ್ತು ಪೋಷಕರ ಪಾತ್ರ (ಭಾಗ-2) (ಡಾ.ರಾಜೀವ್)
೪. ಆಯುರ್ವೇದ ಮತ್ತು ಉಪಯುಕ್ತ ಮನೆ ಔಷಧಿಗಳು (ಶ್ರೀಮತಿ.ಇಂದು ನಾರಾಯಣ್)
೩. ಭಾರತೀಯರಲ್ಲಿ ಹೃದಯ ರೋಗ - (ಡಾ.ಕಿಶೋರ್ ಭಟ್)
೨. ಮಕ್ಕಳ ಬೆಳವಣಿಗೆ ಮತ್ತು ಮನೊವಿಜ್ನಾನ (ಡಾ.ರಾಜೀವ್)
೧. ಆರೊಗ್ಯಕಾರಿ ಹೃದಯಕ್ಕೆ ತಿನಿಸುಗಳು (ಶ್ರಿಮತಿ ರಾಜೇಶ್ವರಿ ಜಯದೇವ್)